ಸಂಘಟಿತ ಸಮಾಜದಿಂದ ಅಭಿವೃದ್ಧಿ : ತುಳು ವಿದ್ವಾಂಸ ಸುರೇಶ್ ಕೊಲಕಾಡಿ ವಿಶ್ವಾಸ

New Project (17)
Published on

ಮೂಲ್ಕಿ: ಸಮಾಜ ಸಂಟಿತವಾದರೆ ವಾತ್ರ ಅಭಿವೃದ್ಧಿ ಸಾಧ್ಯವಿದ್ದು, ಸವಾಜದ ಅರ್ಹ ಫಲಾನುಭವಿಗಳು ಸರ್ಕಾರದ ಸವಲತ್ತು ಪಡೆಯಲು ಸಂಟಿತ ಶ್ರಮ ಅಗತ್ಯ ಎಂದು ತುಳು ವಿದ್ವಾಂಸ ಸುರೇಶ್ ಕೊಲಕಾಡಿ ಹೇಳಿದರು.

ಮುಂಡಾಲ ಕಲ್ಯಾಣ ಸಂಸ್ಥೆ ವತಿಯಿಂದ ಸಂಸ್ಥೆಯ ಸಭಾಭವನದಲ್ಲಿ ಇತ್ತೀಚೆಗೆ ನಡೆದ ಎರಡನೇ ವರ್ಷದ ಭಜನಾ ಸಂಧ್ಯಾ ಹಾಗೂ ಸಾಧಕರಿಗೆ ಸನ್ಮಾನ ಮತ್ತು ಪ್ರತಿಭಾ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಸ್ಥೆ ಅಧ್ಯಕ್ಷ ಶಿವರಾಮ್ ಮೂಲ್ಕಿ ಅಧ್ಯಕ್ಷತೆ ವಹಿಸಿದ್ದರು. ಸಾಧಕರ ನೆಲೆಯಲ್ಲಿ ದೈವಪಾತ್ರಿ ಸುಧಾಕರ, ಅತಿಕಾರಿಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಶಶಿಕಲಾ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪ್ರಕಾಶ್ ಕಿನ್ನಿಗೋಳಿ, ಸಾಹಿತಿ ಸಂದೀಪ್ ಮಧ್ಯ, ಸಾವಾಜಿಕ ಕಾರ್ಯಕರ್ತ ಶರತ್ ಕಾರ್ನಾಡ್, ಮಹಾತ್ಮ ಜ್ಯೋತಿ ಬಾಪುಲೆ ಫೆಲೋಶಿಪ್ ರಾಷ್ಟ್ರಪ್ರಶಸ್ತಿ ಪುರಸ್ಕೃತರಾದ ಲೀಲಪ್ಪ ಶೇರಿಗಾರ್ ತೋಕೂರು, ರವೀಂದ್ರ ಕೆರೆಕಾಡು, ಅರುಣ್ ಬಾಂದೊಟ್ಟು, ರಾಮಚಂದ್ರ ಕಂಗುರಿ, ರಾಜೇಶ್ ಕೆರೆಕಾಡು ಅವರನ್ನು ಸನ್ಮಾನಿಸಲಾಯಿತು.

ಶಿಲ್ಪಿ ಡಿ.ಸುಬ್ರಹ್ಮಣ್ಯ ಕಾರ್ಕಳ, ಸಾಹಿತಿ ಯಶವಂತ ಕುದ್ರೋಳಿ, ಅಖಿಲ ಭಾರತ ಮುಂಡಾಲ ಯುವ ವೇದಿಕೆ ಅಧ್ಯಕ್ಷ ರವಿ ಕಾಪಿಕಾಡು, ಉದ್ಯಮಿ ಶಿವರಾಜ ಕರ್ಕೇರ, ಮೂಲ್ಕಿ ಮೆಸ್ಕಾಂ ಹಿರಿಯ ಸಹಾಯಕಿ ಆಶಾಲತಾ, ಮುಂಡಾಲ ಕಲ್ಯಾಣ ಸಂಸ್ಥೆಯ ಗೌರವಾಧ್ಯಕ್ಷ ಶಂಕರ್ ಗೋಳಿಜೋರ, ಯುವ ವೇದಿಕೆ ಅಧ್ಯಕ್ಷ ಕಮಲಾಕ್ಷ ಕಕ್ವ, ಪದಾಧಿಕಾರಿ ಸುಕುವಾರ್, ಉಪನ್ಯಾಸಕ ರವಾನಂದ ಮತ್ತಿತರರಿದ್ದರು.

ಭಜನಾ ಸಂಧ್ಯಾ ಕಾರ್ಯಕ್ರಮದಲ್ಲಿ ಭಾಗವಹಿಸಿದವರನ್ನು ಗೌರವಿಸಲಾಯಿತು. ಸುರೇಖಾ ಸ್ವಾಗತಿಸಿದರು. ಧನು ಅಂಚನ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net