40.46 ಕೋಟಿ ರೂ. ಸೈಬರ್ ವಂಚನೆ - ಮಂಗಳೂರು ಕಮಿಷನರೆಟ್ ವ್ಯಾಪ್ತಿಯಲ್ಲಿ 42 ಆರೋಪಿಗಳ ಬಂಧನ

FIR-2
Published on

ಮಂಗಳೂರು: ನಗರ ಕಮಿಷನರೆಟ್ ವ್ಯಾಪ್ತಿಯಲ್ಲಿ 2024ನೇ ಸಾಲಿನಲ್ಲಿ ದಾಖಲಾಗಿದ್ದ 134 ಸೈಬರ್ ವಂಚನೆ ಪ್ರಕರಣಗಳ ಪೈಕಿ ಹಲವು ಕ್ಲಿಷ್ಟಕರ ಪ್ರಕರಣಗಳನ್ನು ಭೇದಿಸಿ 42 ಆರೋಪಿಗಳನ್ನು ಬಂಧಿಸಲಾಗಿದೆ.

ಸೆನ್ ಪೊಲೀಸ್ ಠಾಣೆಯಲ್ಲಿ 62 ಹಾಗೂ ಇತರ ಪೊಲೀಸ್ ಠಾಣೆಗಳಲ್ಲಿ 72 ಸಹಿತ 2024ನೇ ಸಾಲಿನಲ್ಲಿ ಒಟ್ಟು 134 ಪ್ರಕರಣ ದಾಖಲಾಗಿದೆ. 2023ರಲ್ಲಿ ಸೆನ್ ಪೊಲೀಸ್ ಠಾಣೆಯಲ್ಲಿ 196 ಹಾಗೂ ಇತರ ಠಾಣೆಗಳಲ್ಲಿ 40 ಸಹಿತ 236 ಪ್ರಕರಣ, 2022ರಲ್ಲಿ ಸೆನ್ ಪೊಲೀಸ್ ಠಾಣೆಯಲ್ಲಿ 55 ಹಾಗೂ ಇತರ ಪೊಲೀಸ್ ಠಾಣೆಗಳಲ್ಲಿ 8 ಪ್ರಕರಣ ಸಹಿತ 63 ಪ್ರಕರಣ ದಾಖಲಾಗಿತ್ತು.

ಹೂಡಿಕೆ ಹೆಸರಿನಲ್ಲಿ 67 ಪ್ರಕರಣದಲ್ಲಿ 30,36,61,299 ರೂ., ಫೆಡೆಕ್ಸ್, ಕೊರಿಯರ್, ಡಿಜಿಟಲ್ ಅರೆಸ್ಟ್ 25 ಪ್ರಕರಣದಲ್ಲಿ 7,07,99,645 ರೂ., ಉದ್ಯೋಗದ ಹೆಸರಲ್ಲಿ 8 ವಂಚನೆ ಪ್ರಕರಣದಲ್ಲಿ 1,21,64,788 ರೂ., ಮ್ಯಾಟ್ರಿಮೋನಿಯಲ್ ಹೆಸರಲ್ಲಿ 4 ಪ್ರಕರಣದಲ್ಲಿ 60,46,708 ರೂ.,ಆನ್‌ಲೈನ್ ಶಾಪಿಂಗ್ ಹೆಸರಲ್ಲಿ 3 ವಂಚನೆ ಪ್ರಕರಣದಲ್ಲಿ 5,93,626 ರೂ. ಕಳೆದುಕೊಂಡಿದ್ದಾರೆ. ಷೇರು ಮಾರ್ಕೆಟ್ ಹೆಸರಲ್ಲಿ 5 ವಂಚನೆ ಪ್ರಕರಣದಲ್ಲಿ 41,96,000 ರೂ., ಜಾಹೀರಾತು ಹೆಸರಲ್ಲಿ 4 ವಂಚನೆ ಪ್ರಕರಣದಲ್ಲಿ 50 ಸಾವಿರ ರೂ., ಕೆವೈಸಿ ಹೆಸರಲ್ಲಿ 3 ವಂಚನೆ ಪ್ರಕರಣದಲ್ಲಿ 8,35,000 ರೂ, ಇತರ ವಂಚನೆ 15 ಪ್ರಕರಣಗಳಲ್ಲಿ 63,28,627 ರೂ. ಸಹಿತ ಒಟ್ಟು 40,46,75,693 ರೂ. ವಂಚಕರ ಪಾಲಾಗಿದೆ.

2024ರಲ್ಲಿ 40,46,75,693 ಕೋಟಿ ರೂ. ಸೈಬರ್ ವಂಚಕರ ಪಾಲಾಗಿದೆ. 9,32,54,814 ಕೋಟಿ ರೂ. ತಡೆ ಹಿಡಿಯಲಾಗಿದೆ. 2,55,45,674 ಕೋಟಿ ರೂ. ದೂರುದಾರರಿಗೆ ಹಿಂತಿರುಗಿಸಲಾಗಿದೆ.

2023ರಲ್ಲಿ 9,83,56,130 ಕೋಟಿ ರೂ. ಸೈಬರ್ ವಂಚಕರ ಪಾಲಾಗಿದೆ. 6,29,82,359 ಕೋಟಿ ರೂ. ತಡೆ ಹಿಡಿಯಲಾಗಿದೆ. 1,17, 16,681 ಕೋಟಿ ರೂ. ದೂರುದಾರರಿಗೆ ಹಿಂತಿರುಗಿಸಲಾಗಿದೆ.

2022ರಲ್ಲಿ 61 ಲಕ್ಷ ರೂ. ವಂಚಕರ ಪಾಲಾಗಿದೆ. 7 ಲಕ್ಷ ತಡೆ ಹಿಡಿಯಲಾಗಿದೆ. 6 ಲಕ್ಷ ರೂ. ಹಿಂತಿರುಗಿಸಲಾಗಿದೆ. ರಾಷ್ಟ್ರೀಯ ಸೈಬರ್ ಕ್ರೈಂ ಪೋರ್ಟಲ್‌ನಲ್ಲಿ 5498 ದೂರುಗಳು ದಾಖಲಾಗಿದ್ದು, ಈ ಪೈಕಿ 215 ಎಫ್‌ಐಆರ್ ಮಾಡಲಾಗಿದೆ. 591 ದೂರುಗಳು ಪೆಂಡಿಂಗ್ ಇವೆ. ಮಹಿಳೆಯರಿಗೆ ಸಂಬಂಧಿಸಿ 10 ಹಾಗೂ ಮಕ್ಕಳಿಗೆ ಸಂಬಂಧಿಸಿ 8 ಸೈಬರ್ ಪ್ರಕರಣ ದಾಖಲಾಗಿದೆ.

ನಿರಂತರ ಜಾಗೃತಿ

ಸೈಬರ್ ಕ್ರೈಂ ಬಗ್ಗೆ ನಗರ ಪೊಲೀಸ್ ಇಲಾಖೆಯಿಂದ ನಿರಂತರವಾಗಿ 217 ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರಮುಖವಾಗಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹಾಗೂ ಸಾರ್ವಜನಿಕರ ಕಡೆಗೆ ಗುರಿ ಮಾಡಲಾಗುತ್ತಿದೆ. ಬ್ಯಾಂಕ್ ಅಧಿಕಾರಿಗಳನ್ನು ಜತೆಗೂಡಿಸಿಕೊಂಡು ವಾಕಥಾನ್, ಜಾಥಾ ಮೊದಲಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಪೊಲೀಸ್ ಆಯುಕ್ತರ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net