ಬಂಟ್ವಾಳ: ವಗ್ಗ ರಾಷ್ಟ್ರೀಯ ಹೆದ್ದಾರಿ ಸಮೀಪದ ಕಾಡಬೆಟ್ಟು ಗ್ರಾಮದ ಪಿಲಿಂಗಾಲು ಶ್ರೀ ಗಾಯತ್ರೀ ದೇವಿ ದೇವಸ್ಥಾನದಲ್ಲಿ ಮಾ.30ರಿಂದ 31ರ ತನಕ 19ನೇ ವರ್ಷದ ಪ್ರತಿಷ್ಠಾಪನಾ ವರ್ಧಂತಿ ಉತ್ಸವ ಮತ್ತು 51ನೇ ವರ್ಷದ ಭಜನಾ ಮಂಗಲೋತ್ಸವ ಹಾಗೂ ಅಣ್ಣಪ್ಪ ಪಂಜುರ್ಲಿ ನೇಮೋತ್ಸವ ನಡೆಯಲಿದೆ.
30ರಂದು ಬೆಳಗ್ಗೆ 7.30 ರಿಂದ ಶ್ರೀ ಮಹಾಗಣಪತಿ, ಶ್ರೀ ಗುರು ರಾಘವೇಂದ್ರ ಮತ್ತು ಶ್ರೀ ಗಾಯತ್ರೀ ದೇವಿಗೆ ಪಂಚಾಮೃತ ಅಭಿಷೇಕ, ಪುರಸ್ಸರ ನವಕ ಪ್ರಧಾನ ಕಲಶಾಭಿಷೇಕ, 11ಕ್ಕೆ ಆಶ್ಲೇಷಾ ಬಲಿ ಮತ್ತು ನಾಗತಂಬಿಲ, ಕಾಲ ರಕ್ತೇಶ್ವರಿಗೆ ಪರ್ವ, ಮಧ್ಯಾಹ್ನ 12.30ರಿಂದ ಮಹಾಪೂಜೆ ನಡೆಯಲಿದೆ. ಸಂಜೆ 7ಕ್ಕೆ ಭಜನಾ ಮಂಗಲೋತ್ಸವ ಆರಂಭ, ರಾತ್ರಿ 9ಕ್ಕೆ ಮಹಾಪೂಜೆ ನಡೆಯಲಿದೆ.
31ರಂದು ಬೆಳಗ್ಗೆ 8ಕ್ಕೆ ಗಣಯಾಗ ಮತ್ತು ಗಾಯತ್ರೀ ಯಾಗ ನಡೆಯಲಿದ್ದು, 10.30ಕ್ಕೆ ರಕ್ತೇಶ್ವರಿ, ಮಹಿಷಂದಾಯ, ಅಣ್ಣಪ್ಪ ಪಂಜುರ್ಲಿ ದೈವಕ್ಕೆ ಪರ್ವ, 11ಕ್ಕೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, 1ಕ್ಕೆ ಮಹಾಪೂಜೆ ನಡೆಯಲಿದೆ. ಸಂಜೆ 6ಕ್ಕೆ ಭಜನೆ ಮತ್ತು ರಾತ್ರಿ 8ಕ್ಕೆ ರಂಗಪೂಜೆ, ಮಹಾಪೂಜೆ ನಡೆಯಲಿದೆ. ರಾತ್ರಿ 9ಕ್ಕೆ ಅಣ್ಣಪ್ಪ ಪಂಜುರ್ಲಿ ದೈವದ ನೇಮೋತ್ಸವ ನಡೆಯಲಿದೆ ಎಂದು ದೇವಳ ಆಡಳಿತ ಧರ್ಮದರ್ಶಿ ಕೆ.ಎಸ್.ಪಂಡಿತ್ ತಿಳಿಸಿದ್ದಾರೆ.