

ಕೋಟ: ಆಧ್ಯಾತ್ಮಿಕ, ಆದಿದೈವಿಕ ಮತ್ತು ಆದಿಭೌತಿಕ ದುರಿತಗಳಿಂದ ದೂರವಿರಲು ಅಬಾಲವೃದ್ಧರಿಗೆ ಭಜನೆ ಮತ್ತು ಸಂಕೀರ್ತನೆ ಸುಲಭ ಸಾಧ್ಯ ಎಂದು ದೇವಳದ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಹೇಳಿದರು.
ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇಗುಲದಲ್ಲಿ ಧನುರ್ಮಾಸದ ಪ್ರಥಮ ಶನಿವಾರ ಕೂಟ ಮಹಾಜಗತ್ತು ಸಂಸ್ಥೆಯವರು ಪ್ರಾಯೋಜಿಸಿದ ಕುಂಜಾಲು ಗಿರಿಯ ಗಿರಿ ಬಳಗ ವಿಪ್ರ ತಂಡದವರ ತುಳಸಿ ಸಂಕೀರ್ತನೆ ಉದ್ಘಾಟಿಸಿ ಮಾತನಾಡಿದರು.
ಕೂಟ ಮಹಾಜಗತ್ತು ಸಾಲಿಗ್ರಾಮ ಮಾಜಿ ಅಧ್ಯಕ್ಷರಾದ ಐರೋಡಿ ಜಗದೀಶ ಕಾರಂತ, ಕೆ.ತಾರಾನಾಥ ಹೊಳ್ಳ ಹಾಗೂ ಎ.ಶ್ರೀಪತಿ ಅಧಿಕಾರಿ, ದೇವಸ್ಥಾನ ಆಡಳಿತ ಮಂಡಳಿ ಕಾರ್ಯದರ್ಶಿ ಐರೋಡಿ ಲಕ್ಷ್ಮೀನಾರಾಯಣ ತುಂಗ, ವ್ಯವಸ್ಥಾಪಕ ನಾಗರಾಜ ಹಂದೆ, ಗಿರಿ ಬಳಗ ಕುಂಜಾಲುಗಿರಿಯ ಅಧ್ಯಕ್ಷ ನವೀನ್ ಕುಮಾರ್, ಸಿಬ್ಬಂದಿ ಗಣೇಶ ಭಟ್ಟ, ಅಮರ್ ಹಂದೆ, ಪಿ.ಪ್ರಕಾಶ ಹೇರ್ಳೆ, ಚಿದಾನಂದ ತುಂಗ, ಜಿ.ಜಗದೀಶ ಐತಾಳ, ಮಹಿಳಾ ವೇದಿಕೆ ಅಧ್ಯಕ್ಷೆ ಯಶೋದಾ ಹೊಳ್ಳ, ವೈ.ಸದಾರಾಮ ಹೇರ್ಳೆ, ಉಪಾಧ್ಯಕ್ಷ ಕೃಷ್ಣ ಪ್ರಸಾದ್ ಹೇರ್ಳೆ ಉಪಸ್ಥಿತರಿದ್ದರು. ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗ ಸಂಸ್ಥೆ ಅಧ್ಯಕ್ಷ ಪಿ.ಚಂದ್ರಶೇಖರ ಹೊಳ್ಳ ಸ್ವಾಗತಿಸಿದರು. ಕಾರ್ಯದರ್ಶಿ ಮಹಾಬಲ ಹೇರ್ಳೆ ವಂದಿಸಿದರು.