ಯುವವಾಹಿನಿ ಸಾಮಾಜಿಕ ಕಾರ್ಯ ಶ್ಲಾಘನಾರ್ಹ : ಶ್ರೀನಿವಾಸ ಪೂಜಾರಿ ಮೆಚ್ಚುಗೆ

New Project (2)
Published on

ಬಂಟ್ವಾಳ: ಸಮಾಜಸೇವೆ, ಶಿಸ್ತು ಮತ್ತು ಒಗ್ಗಟ್ಟಿನ ಮೌಲ್ಯಗಳನ್ನು ಪಾಲಿಸುತ್ತಾ, ಯುವವಾಹಿನಿಯು ಯುವಕರಲ್ಲಿ ಹೊಸ ಚೈತನ್ಯವನು ತುಂಬುತ್ತಿದೆ. ಜತೆಗೆ ಶ್ರಮ ಮತ್ತು ಪ್ರತಿಭೆಯನ್ನು ಸಮಾಜದ ಅಭಿವೃದ್ಧಿಗೆ ಮುಡಿಪಾಗಿಟ್ಟು ಯುವಶಕ್ತಿಗೆ ಮಾರ್ಗದರ್ಶನವಾಗಿದೆ ಎಂದು ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಪೂಜಾರಿ ಮೆಲ್ಕಾರ್ ಮೆಚ್ಚುಗೆ ಸೂಚಿಸಿದರು.

ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ಮೇನಾಡು ಉದಯ ಪೂಜಾರಿ ಮನೆಯಲ್ಲಿ ಆಯೋಜನೆಗೊಂಡ ಗುರುತತ್ವವಾಹಿನಿ ಭಜನಾ ಸಂಕೀರ್ತನೆಯಲ್ಲಿ ಗುರುಸಂದೇಶ ನೀಡಿದರು. ಉದಯ ಪೂಜಾರಿ ಮೇನಾಡು ಶುಭಹಾರೈಸಿದರು.

ಯುವವಾಹಿನಿ ಬಂಟ್ವಾಳ ಘಟಕ ಕಾರ್ಯದರ್ಶಿ ಮಧುಸೂದನ್ ಮಧ್ವ, ಉಪಾಧ್ಯಕ್ಷ ಕಿರಣ್‌ರಾಜ್ ಪೂಂಜರೆಕೋಡಿ, ಪ್ರಮುಖರಾದ ನಿಕೇಶ್ ಕೋಟ್ಯಾನ್, ಪ್ರಜಿತ್ ಅಮೀನ್ ಏರಮಲೆ, ಧನುಷ್ ಮಧ್ವ, ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ, ಮಹೇಶ್ ಬೊಳ್ಳಾಯಿ, ರಂಜಿತ್, ಯಶೋಧರ ಕಡಂಬಳಿಕೆ, ದಿನೇಶ್ ಸುವರ್ಣ ರಾಯಿ, ಪ್ರೇಮನಾಥ್ ಕೆ, ಅರುಣ್ ಕುಮಾರ್, ನಾಗೇಶ್ ಪೊನ್ನೋಡಿ, ಶಿವಾನಂದ ಎಂ, ಹರೀಶ್ ಕೋಟ್ಯಾನ್, ರಾಜೇಶ್ ಸುವರ್ಣ, ರಾಮಚಂದ್ರ ಸುವರ್ಣ, ನವೀನ್ ಕುಡ್ಮೇರು, ಆನಂದ ಪೂಜಾರಿ ಅಜ್ಜಿಬೆಟ್ಟು, ಸುದೀಪ್ ಸಾಲ್ಯಾನ್, ನವೀನ್ ಕಾರಾಜೆ, ನಾರಾಯಣ ಪಲ್ಲಿಕಂಡ, ಯತೀಶ್ ಬೊಳ್ಳಾಯಿ, ಹರಿಣಾಕ್ಷಿ ನಾವೂರು ಮತ್ತಿತರರು ಉಪಸ್ಥಿತರಿದ್ದರು. ನಾಗೇಶ್ ಪೂಜಾರಿ ಸ್ವಾಗತಿಸಿದರು. ಹರೀಶ್ ಸಾಲ್ಯಾನ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net