ಪಾಂಡೇಶ್ವರ ಕಳಿಬೈಲು ಕ್ಷೇತ್ರದಲ್ಲಿ ಭಜನೆ

pandeshwara
ಸಾಸ್ತಾನದ ಸಮೀಪದ ಪಾಂಡೇಶ್ವರ ಮೂಡಹಡುವಿನ ಕಳಿಬೈಲು ಶ್ರೀಕ್ಷೇತ್ರ ತುಳಸಿ ಅಮ್ಮ, ಶಿರಸಿಮಾರಿಕಾಂಬಾ ಹಾಗೂ ಕೊರಗಜ್ಜ ಪರಿವಾರ ದೇಗುಲದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉಪನ್ಯಾಸಕ ಕೃಷ್ಣ ಸಾಸ್ತಾನ ಉದ್ಘಾಟಿಸಿದರು.
Published on

ಕೋಟ: ಸಾಸ್ತಾನದ ಸಮೀಪದ ಪಾಂಡೇಶ್ವರ ಮೂಡಹಡುವಿನ ಕಳಿಬೈಲು ಶ್ರೀಕ್ಷೇತ್ರ ತುಳಸಿ ಅಮ್ಮ, ಶಿರಸಿಮಾರಿಕಾಂಬಾ ಹಾಗೂ ಕೊರಗಜ್ಜ ಪರಿವಾರ ದೇಗುಲದಲ್ಲಿ ಅ.3ರಿಂದ ಆರಂಭಗೊಂಡ ಶರನ್ನವರಾತ್ರಿ ಉತ್ಸವ ಅ.13ರ ವಿಜಯದಶಮಿಯಂದು ಸಂಪನ್ನಗೊಳ್ಳಲಿದೆ.

ಬುಧವಾರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉಪನ್ಯಾಸಕ ಕೃಷ್ಣ ಸಾಸ್ತಾನ ಉದ್ಘಾಟಿಸಿದರು. ಮೊಕ್ತೇಸರ ಎಂ.ಸಿ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಹಂಗಾರಕಟ್ಟೆ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಮನೋಜ್ ಕುಮಾರ್, ಸಾಸ್ತಾನ ಗೋಳಿಗರಡಿ ಬ್ರಹ್ಮಬೈದರ್ಕಳ ಭಜನಾ ಮಂಡಳಿ ಮುಖ್ಯಸ್ಥೆ ಕುಸುಮಾ ಮನೋಜ್, ಪತ್ರಕರ್ತ ರವೀಂದ್ರ ಕೋಟ ಉಪಸ್ಥಿತರಿದ್ದರು. ಅರ್ಚಕ ಅಭಿಜಿತ್ ಪಾಂಡೇಶ್ವರ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net