ಒಗ್ಗಟ್ಟು ಮೂಡುವಿಕೆಗೆ ಭಜನೆ ಸಹಕಾರಿ : ಉಲ್ಲಾಸ್ ಮೇಸ್ತ ಅಭಿಪ್ರಾಯ

bhajane
ಭಜನಾ ಕಮ್ಮಟದ ಪೂರ್ವಭಾವಿ ಸಭೆಯಲ್ಲಿ ಉಲ್ಲಾಸ್ ಮೇಸ್ತ ಮಾತನಾಡಿದರು.
Published on

ವಿಜಯವಾಣಿ ಸುದ್ದಿಜಾಲ ಬ್ರಹ್ಮಾವರ
ಭಜನೆ ಸನಾತನ ಧರ್ಮದ ಮೂಲ ಬೇರು. ಭಜನೆಯಿಂದ ಕುಟುಂಬ, ಮನೆ ಮತ್ತು ಊರು ಸಂಘಟಿತವಾಗಲು ಸಹಕಾರಿಯಾಗುತ್ತದೆ ಎಂದು ರಾಷ್ಟ್ರೀಯ ಸ್ವಸಹಾಯ ಸಂಘಗಳ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಉಲ್ಲಾಸ್ ಮೇಸ್ತ ಹೇಳಿದರು.

ಧರ್ಮಸ್ಥಳದಲ್ಲಿ ನಡೆಯಲಿರುವ 26ನೇ ವರ್ಷದ ಭಜನಾ ಕಮ್ಮಟದ ಕುರಿತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬ್ರಹ್ಮಾವರ ತಾಲೂಕು ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಆಶ್ರಯದಲ್ಲಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ತಾಲೂಕಿನ ಯೋಜನಾಧಿಕಾರಿ ರಮೇಶ್ ಪಿ.ಕೆ, ಉಡುಪಿ ಜಿಲ್ಲಾ ಭಜನಾ ಪರಿಷತ್ ಸಮನ್ವಯ ಅಧಿಕಾರಿ ರಾಘವೇಂದ್ರ, ಭಜನಾ ಪರಿಷತ್ ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಬಸ್ರೂರು, ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಪ್ರಸನ್ನ, ಉಪಾಧ್ಯಕ್ಷ ರಾಘವೇಂದ್ರ ರಾವ್ ಬಾರ್ಕೂರು, ಕಾರ್ಯದರ್ಶಿ ಸುರೇಂದ್ರ ಶೆಟ್ಟಿ, ಕೋಶಾಧಿಕಾರಿ ಶಶಿಕಲಾ ಉಪಸ್ಥಿತರಿದ್ದರು. ಬಾರಕೂರು ಮೇಲ್ವಿಚಾರಕಿ ನೇತ್ರಾವತಿ ಸ್ವಾಗತಿಸಿದರು. ರವೀಂದ್ರ ಎಸ್. ಕಾರ್ಯಕ್ರಮ ನಿರೂಪಿಸಿದರು.

ಪರಿಷತ್ ವತಿಯಿಂದ ಸನ್ಮಾನ

ಗೌರವ ಸಲಹೆಗಾರರಾಗಿ ಆಯ್ಕೆಯಾದ ಸವಿತಾ ಎರ್ಮಾಳ್, ಹರೀಶ್ ಶಾನಭಾಗ್, ಬಾಲಕೃಷ್ಣ ಶೆಟ್ಟಿ ಅವರನ್ನು ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net