ಭಗವಾನ್ ಶ್ರೀಸತ್ಯಸಾಯಿ ಬಾಬಾ ಜನ್ಮದಿನ ಆಚರಣೆ

New Project (47)
Published on

ಕಾಸರಗೋಡು: ನಗರದ ತಾಳಿಪಡ್ಪು ಭಗವಾನ್ ಶ್ರೀ ಸತ್ಯಸಾಯಿ ಅಭಯ ನಿಕೇತನದ ಆಶ್ರಯದಲ್ಲಿ ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರ 99ನೇ ಜನ್ಮದಿನವನ್ನು ಭಕ್ತಿ, ಸಂಭ್ರಮದಿಂದ ಅಚರಿಸಲಾಯಿತು.

ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಶ್ರೀ ಸತ್ಯಸಾಯಿ ಬಾಬಾ ಅವರ 100ನೇ ಜನ್ಮದಿನಾಚರಣೆಯ ಪ್ರಯುಕ್ತ ನಡೆಯುತ್ತಿರುವ ಕಾರ್ಯಕ್ರಮಗಳಿಗೆ ಸ್ವಾಮೀಜಿ ಚಾಲನೆಯಿತ್ತು ಆಶೀರ್ವಚನ ನೀಡಿದರು.

ಕಾಸರಗೋಡಿನ ಚರ್ಮರೋಗ ತಜ್ಞ ಡಾ.ಕೆ.ಎಂ.ವಿಷ್ಣು ಭಟ್ ಅವರನ್ನು ಸ್ವಾಮೀಜಿ ಸನ್ಮಾನಿಸಿದರು. ಶ್ರೀ ಸತ್ಯಸಾಯಿ ಅಭಯ ನಿಕೇತನದ ಅಧ್ಯಕ್ಷ ಡಾ.ಎಸ್.ಬಿ.ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಕಾರ್ಯದರ್ಶಿ ಪಿ.ಲತಾ, ಜತೆ ಕಾರ್ಯದರ್ಶಿಗಳಾದ ರಾಮಕೃಷ್ಣ ಬಲ್ಲಾಳ್ ಬಿ, ಪ್ರೇಂ ಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಓಂಕಾರಂ, ಸುಪ್ರಭಾತಂ, ನಾಗರ ಸಂಕೀರ್ತನೆ, ಗಣಪತಿ ಹೋಮ, ಧ್ವಜಾರೋಹಣ, ಸತ್ಯನಾರಾಯಣ ಪೂಜೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net