ಭಗವದ್ಗೀತೆ ಕಲಿಕೆ ತರಗತಿ ಆರಂಭ

baghavadhgeetha
ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಭಗವದ್ಗೀತಾ ತರಗತಿ ಪ್ರಾರಂಭೋತ್ಸವ ನಡೆಯಿತು.
Published on

ಬೆಳ್ತಂಗಡಿ: ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ ವತಿಯಿಂದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ೨೦೨೪-೨೫ ನೇ ಸಾಲಿನ ಭಗವದ್ಗೀತಾ ತರಗತಿ ಕಾರ್ಯಕ್ರಮಕ್ಕೆ ದೇವಸ್ಥಾನ ಪ್ರಧಾನ ಅರ್ಚಕ ದಿನೇಶ್ ಭಟ್ ಚಾಲನೆ ನೀಡಿದರು.

ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ ಅಧ್ಯಕ್ಷ ಹರೀಶ್ ಮೊರ್ತಾಜೆ, ಪ್ರೌಢಶಾಲಾ ಮುಖ್ಯಶಿಕ್ಷಕ ರಾಜೇಂದ್ರ ಎಂ., ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ರೋಹಿಣಿ ಕೆ., ಟ್ರಸ್ಟಿಗಳಾದ ಹರೀಶ್ ಕಾರಿಂಜ, ಗಣೇಶ್ ನಾವೂರು, ತನಿಯಪ್ಪ ನಲ್ಕೆ, ತಿಮ್ಮಪ್ಪ ಗೋಲ್ತರ, ಪೂರ್ಣಿಮಾ ಧರ್ಣಪ್ಪ ಮೂಲ್ಯ, ವೈದ್ಯ ಡಾ.ಪ್ರದೀಪ್ ಉಪಸ್ಥಿತರಿದ್ದರು.

ಕಳೆದ ೮ ವರ್ಷಗಳಿಂದ ಪ್ರತಿ ಬುಧವಾರ ನಾವೂರು ದೇವಸ್ಥಾನದಲ್ಲಿ ಭಗವದ್ಗೀತಾ ಪಾಠ-ಪಠಣ ತರಗತಿ ನಡೆಯುತ್ತಿದ್ದು, ವಿದ್ಯಾರ್ಥಿಗಳು ಈಗಾಗಲೇ ೧೨ ಹಾಗೂ ೧೫ ಅಧ್ಯಾಯ ಕಂಠಪಾಠ ಮಾಡಿದ್ದಾರೆ. ಈ ವರ್ಷ ೧೬ ಅಧ್ಯಾಯದ ಪಾಠ ಮುಂದುವರಿಯಲಿದ್ದು ಊರಿನ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net