

ಬ್ಯಾಡಗಿ: ತಾಲೂಕಿನ ಮಲ್ಲೂರು ಗ್ರಾಮದಲ್ಲಿ ಆ. 28 ಹಾಗೂ 29ರಂದು ಶ್ರೀ ಭದ್ರಕಾಳಮ್ಮದೇವಿ ಪ್ರತಿಷ್ಠಾಪನೆ ಕಾರ್ಯಕ್ರಮ ಜರುಗಲಿದೆ.
ಪ್ರತಿಷ್ಠಾಪನೆ ಉತ್ಸವ ಅಂಗವಾಗಿ ಹೇರೂರು ಗುಬ್ಬಿ ಅಜ್ಜನ ಮಠದ ಷ.ಬ್ರ. ನಂಜುಂಡ ಪಂಡಿತಾರಾಧ್ಯ ಶಿವಾಚಾರ್ಯರ ನೇತೃತ್ವದಲ್ಲಿ ಆ. 28ರಂದು ಮಧ್ಯಾಹ್ನ 3 ಗಂಟೆಗೆ ಕಾಳಮ್ಮದೇವಿ ಮೂರ್ತಿ ಮೆರವಣಿಗೆ ನಡೆಯಲಿದೆ.
ಆ. 29ರಂದು ಬೆಳಗ್ಗೆ 8 ಗಂಟೆಗೆ ಕುಂಭಾಭಿಷೇಕ ಹಾಗೂ ವಿಶೇಷ ಪೂಜೆ ನಡೆಯಲಿದೆ. ಬಳಿಕ ಶ್ರೀ ಭದ್ರಕಾಳಮ್ಮನ ಪ್ರತಿಷ್ಠಾಪನೆ ಕಾರ್ಯಕ್ರಮದ ಸಾನ್ನಿಧ್ಯವನ್ನು ರಟ್ಟಿಹಳ್ಳಿ ಕಬ್ಬಿಣ ಕಂತಿಮಠದ ಶಿವಲಿಂಗ ಶ್ರೀಗಳು ಹಾಗೂ ಕೂಡಲದ ಷ.ಬ್ರ. ಮಹೇಶ್ವರ ಶಿವಾಚಾರ್ಯರು ವಹಿಸುವರು.