

ಬಾಗಲಕೋಟೆ: ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಗಾಳಿಪಟ ಉತ್ಸವ ಬಾಗಲಕೋಟೆ ಜನತೆಗೆ ಮುದ ನೀಡಿತು. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಕ್ಕಳು, ಸಾರ್ವಜನಿಕರು ಗಾಳಿಪಟ ಉತ್ಸವ ನೋಡಿ ಆನಂದಿಸಿದರು. ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿ, ಪವರ್ ಸ್ಟ್ರ‍್ಯಾರ್ ಪುನೀತರಾಜಕುಮಾರ, ಕಾಂತಾರ ಚಿತ್ರದ ಪಂಜುರ್ಲಿ ದೈವ, ಮೀನ, ಹುಲಿ, ಎತ್ತು, ಮೊಲ ಸೇರಿದಂತೆ ವಿವಿಧ ಚಿತ್ರ ಹಾಗೂ ಆಕಾರ ಗಾಳಿಪಟಗಳು ಗಮನ ಸೆಳೆದರು.