

ಬಾಗಲಕೋಟೆ: ಮುಳಗಡೆಯಿಂದ ನಲಗಿ ಹೋಗಿರುವ ಬಾಗಲಕೋಟೆ ನಗರದ ಸಂತ್ರಸ್ತರ ಸಮಸ್ಯೆಗಳ ಪರಿಹಾರಕ್ಕೆ ರಾಜಕೀಯ ನಾಯಕರು ಪಕ್ಷಾತೀತವಾಗಿ ಧ್ವನಿಯಾಗಬೇಕು ಎಂದು ಮಂತ್ರಾಲಯ ರಾಘವೇಂದ್ರಮಠದ ಸುಬಧೇಂದ್ರತೀರ್ಥರ ಶ್ರೀಪಾದಂಗಳವರು ಹೇಳಿದರು.
ನಗರದ ಕಿಲ್ಲಾ ಪ್ರದೇಶದಲ್ಲಿ ಬುಧವಾ ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೆ ಮುಳಗಡೆ ವಿಚಾರ ಬಂದಾಗ ಪಕ್ಷಾತೀತವಾಗಿ ಹೋರಾಟ ಮಾಡಲು ಸೂಚನೆ ನೀಡಿದ್ದೇವು. ಅಂದು ಶಾಸಕರಾಗಿದ್ದ ಪಿ.ಎಚ್.ಪೂಜಾರ ಸಮರ್ಥವಾಗಿ ಮುಳಗಡೆ ವಿಚಾರ ನಿಭಾಯಿಸಿದ್ದರು ಎಂದು ನೆನಪಿಸಿಕೊಂಡರು.
ಅಲ್ಲದೆ ಎಚ್.ವೈ.ಮೇಟಿ ಅವರನ್ನು ಉದ್ದೇಶಿಸಿ ಮಾತನಾಡಿದ ಶ್ರೀಗಳು, ಮಾಜಿ ಸಚಿವ ಮೇಟಿ ಅವರು ಹಲವು ಬಾರಿ ಮಂತ್ರಾಲಯಕ್ಕೆ ಭೇಟಿ ನೀಡಿದ್ದಾರೆ. ಅವರು ಸಮಸ್ಯೆಯೊಂದರಲ್ಲಿ ಇದ್ದಾಗ ಆತ್ಮಸ್ಥೈರ್ಯ ತುಂಬಲಾಗಿತ್ತು. ವಿ.ಪ ಪಿ.ಎಚ್.ಪೂಜಾರ, ಮಾಜಿ ಸಚಿವ ಎಚ್.ವೈ.ಮೇಟಿ ಈ ಇಬ್ಬರು ನಾಯಕರಿಗೆ ಜನ ಸೇವೆ ಮಾಡುವ ಶಕ್ತಿ ದೇವರು ನೀಡಲಿ ಎಂದು ಆಶಿರ್ವಾದ ಮಾಡಿದರು.
ಮಾಜಿ ಸಚಿವ ಎಚ್.ವೈ.ಮೇಟಿ ಮಾತನಾಡಿ, ನಾನು ಅನೇಕ ಭೇಟಿ ನೀಡಿದ್ದೇನೆ. ಕಷ್ಟದಲ್ಲಿದ್ದಾಗ ರಾಯರು ಕೈ ಹಿಡಿದ್ದಾರೆ. ಸದಾ ಸ್ಮರಿಸುತ್ತೇನೆ ಎಂದರು.
ವಿ.ಪ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿ, ಮಂತ್ರಾಲಯ ಕ್ಷೇತ್ರದಲ್ಲಿ ಪವಾಡವಿದೆ. ರಾಯರನ್ನು ನೆನೆದಾಗ ಶಾಂತಿ, ನೆಮ್ಮದಿ ದೊರಕುತ್ತದೆ. ಶ್ರೀಗಳು ಧರ್ಮ ಜಾಗೃತಿಯ್ಲಲ್ಲಿ ನಿತರರಾಗಿದ್ದಾರೆ. ಸಮಾಜಕ್ಕೆ ಉತ್ತಮ ಮಾಗದರ್ಶನ ಮಾಡುತ್ತಿದ್ದಾರೆ. ನಡುಗಡ್ಡೆ ವಿಚಾರದಲ್ಲಿ ಜನರ ಧ್ವನಿಯಾಗಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅನಂತ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವಿ.ಪ ಸದಸ್ಯ ಹನುಮಂತ ನಿರಾಣಿ, ಚಂದ್ರಣ್ಣ ದಾಸ್, ಜಿ.ಪಂ ಮಾಜಿ ಉಪಾಧ್ಯಕ್ಷ ಹೂವಪ್ಪ ರಾಠೋಡ, ಡಾ.ಗಿರೀಶ ಮಾಸೂರಕರ ಇತರರು ಇದ್ದರು.