ಸಂಘಟಿತರಾದರೆ ಮಾತ್ರ ಉತ್ತಮ ಸ್ಥಾನಮಾನ

ಸಂಘಟಿತರಾದರೆ ಮಾತ್ರ ಉತ್ತಮ ಸ್ಥಾನಮಾನ
Published on

ಪಿರಿಯಾಪಟ್ಟಣ: ರಾಜ್ಯದಲ್ಲಿ ಮಡಿವಾಳ ಸಮುದಾಯ ಸಂಘಟಿತರಾದರೆ ಮಾತ್ರ ರಾಜಕೀಯ ಹಾಗೂ ಆರ್ಥಿಕವಾಗಿ ಉತ್ತಮ ಸ್ಥಾನಮಾನ ಸಿಗುತ್ತದೆ ಎಂದು ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಆರ್.ರಘು ಕೌಟಿಲ್ಯ ಹೇಳಿದರು.

ಪಟ್ಟಣದ ದೇವರಾಜ ಅರಸು ಕಲಾಭವನದಲ್ಲಿ ತಾಲೂಕು ಮಡಿವಾಳ ಮಾಚಿದೇವ ಸಂಘದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಮಡಿವಾಳ ಬಂಧುಗಳ ಪುನಶ್ಚೇತನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಡಿವಾಳ ಸಮುದಾಯ ಅನಾದಿಕಾಲದಿಂದಲೂ ಸಂಕಷ್ಟಕ್ಕೆ ಒಳಗಾಗಿದ್ದು, ವೃತ್ತಿಪರ ಆರ್ಥಿಕ ಸಫಲತೆ ಇಲ್ಲದೆ ಹಿಂದುಳಿದಿದೆ ಎಂದರು.

ಮಡಿವಾಳ ಮಹಿಳಾ ಸಂಘದ ರಾಜ್ಯಾಧ್ಯಕ್ಷೆ ವಿಜಯಲಕ್ಷ್ಮೀ ಅಂಜನಪ್ಪ ಮಾತನಾಡಿ, ಸಮುದಾಯದ ಮಹಿಳೆಯರು ಜಾಗೃತರಾಗಿ ತಮ್ಮದೇ ಆದ ಸ್ವ-ಸಹಾಯ ಗುಂಪುಗಳನ್ನು ರಚಿಸಿಕೊಂಡು ಸ್ವ ಉದ್ಯೋಗ ಕಂಡುಕೊಳ್ಳುವ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು. ಸರ್ಕಾರಿ ಯೋಜನೆಗಳು ಬಲಾಢ್ಯರ ಪಾಲಾಗುತ್ತಿದ್ದು, ಸಮುದಾಯದವರು ಸಂಘಟಿತರಾಗಿ ಸರ್ಕಾರದಿಂದ ಅನೂಕೂಲ ಪಡೆದುಕೊಳ್ಳಬೇಕು ಎಂದರು.

ತಾಲೂಕು ಮಡಿವಾಳ ಸಂಘದ ಅಧ್ಯಕ್ಷ ಮಾದೇಶ್ ಕುಮಾರ್, ಕೆ.ಆರ್. ನಗರ ತಾಲೂಕು ಮಡಿವಾಳ ಸಂಘದ ಅಧ್ಯಕ್ಷ ಸಿದ್ದನ ಕೊಪ್ಪಲು ಕುಮಾರ್, ಟೌನ್ ಮಡಿವಾಳ ಸಂಘದ ಅಧ್ಯಕ್ಷ ಸತೀಶ್, ಶಿವಸ್ವಾಮಿ, ರಾಮಚಂದ್ರ ಶೆಟ್ಟರು, ರಾಘವ, ವೆಂಕಟೇಶ್, ಸೋಮು, ಸತೀಶ್, ಪ್ರದೀಪ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net