ಆಧುನಿಕ ತಂತ್ರಜ್ಞಾನ ಮೂಲಕ ಗ್ರಾಹಕರಿಗೆ ಉತ್ತಮ ಸೇವೆ

byn (3)
Published on

ಬೈಂದೂರು: ಕೊಡಚಾದ್ರಿ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂ 2,189 ಸದಸ್ಯರನ್ನು ಹೊಂದಿದ್ದು, 21 ಲಕ್ಷ ರೂ. ಪಾಲು ಬಂಡವಾಳ ಹೊಂದಿದೆ. 11 ಕೋಟಿ ರೂ.ಗೂ ಅಧಿಕ ಠೇವಣಿ ಹೊಂದಿದ್ದು, ಸದಸ್ಯರಿಗೆ 9 ಕೋಟಿ ರೂ.ಗೂ ಅಧಿಕ ಸಾಲ ನೀಡಲಾಗಿದೆ. 3 ಕೋಟಿ ರೂ.ಗೂ ಅಧಿಕ ಹಣ ವಿವಿಧ ಆರ್ಥಿಕ ಸಂಸ್ಥೆಗಳಲ್ಲಿ ಧನ ವಿನಿಯೋಗ ವಾಡಲಾಗಿದೆ. ಈ ಬಾರಿ ಸದಸ್ಯರಿಗೆ ಶೇ.12 ಡಿವಿಡೆಂಡ್ ನೀಡಲಾಗುವುದು ಎಂದು ಸಂ ಅಧ್ಯಕ್ಷ ಕೊಲ್ಲೂರು ರಮೇಶ ಗಾಣಿಗ ಹೇಳಿದರು.

ಸಂದ ಕಚೇರಿ ವಠಾರದಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಸಾವಾನ್ಯ ಸಭೆ ಅಧ್ಯಕ್ಷತೆ ವಹಿಸಿ ವಾತನಾಡಿದರು.

ಸಂದ ಗ್ರಾಹಕರಿಗೆ ಆರ್ಥಿಕ ಸೇವೆ ಒದಗಿಸುವುದು ಮತ್ತು ಎಲ್ಲ ರೀತಿಯ ಸೌಲಭ್ಯ ನೀಡಲು ಸಂ ಬದ್ಧವಾಗಿದೆ. ಸಾರ್ವಜನಿಕರಿಗೆ ಅಗತ್ಯ ನೆರವು ನೀಡುವುದರ ಜತೆಗೆ ತನ್ನ ಸೇವಾ ಬದ್ಧತೆಯನ್ನು ಗಟ್ಟಿಗೊಳಿಸಿದೆ. ವ್ಯವಹಾರ ಮೌಲ್ಯ ಕಾಯ್ದುಕೊಂಡಿರುವ ಸಂಸ್ಥೆಯು ಸಹಕಾರಿ ಕ್ಷೇತ್ರದಲ್ಲಿ ಆಧುನಿಕ ಕಾಲವಾನಕ್ಕೆ ತಕ್ಕಂತೆ ತಂತ್ರಜ್ಞಾನ ಅಳವಡಿಸಿಕೊಂಡು ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ ಎಂದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಗಾಣಿಗ ವಾರ್ಷಿಕ ವರದಿ, ಲೆಕ್ಕಪತ್ರ ಹಾಗೂ ಮುಂದಿನ ಸಾಲಿನ ಬಜೆಟ್ ಮಂಡಿಸಿದರು. ಸಂ ಉಪಾಧ್ಯಕ್ಷೆ ಹೇಮಲತಾ ಹೆಬ್ಬಾರ್, ನಿರ್ದೇಶಕರಾದ ಗೀತಾ ಆರ್.ಹೆಗ್ಡೆ, ಪುಟ್ಟಯ್ಯ ಗಾಣಿಗ, ರುನಾಥ ಕೆ., ನೇತ್ರಾವತಿ ಆಚಾರ್ಯ, ಲೋಲಾಕ್ಷಿ ಪಂಡಿತ್, ಪ್ರೇವಾ, ನಾಗೇಂದ್ರ, ಸುರೇಶ್ ಉಪಸ್ಥಿತರಿದ್ದರು. ಪೃಥ್ವಿನ್ ಪ್ರಾರ್ಥಿಸಿದರು. ಸುಬ್ರಹ್ಮಣ್ಯ ಪಡುಕೋಣೆ ನಿರೂಪಿಸಿದರು. ಜಯಶೀಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net