ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಯ ಅತ್ಯುತ್ತಮ ಶಿಕ್ಷಕರಿವರು

Teachers-award
Published on

ಕಾರವಾರ: ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಯ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟಿಸಲಾಗಿದೆ. ಪ್ರಾಥಮಿಕ ಹಾಗೂ ಪ್ರೌಢ ವಿಭಾಗದಲ್ಲಿ ಪ್ರತ್ಯೇಕವಾಗಿ ಒಟ್ಟು 15 ಗುರುಗಳಿಗೆ ಪ್ರಶಸ್ತಿ ಘೋಷಿಸಲಾಗಿದೆ.

ಸೆ.5 ರಂದು ಭಟ್ಕಳದ ಮುರ್ಡೇಶ್ವರದಲ್ಲಿ ನಡೆಯುವ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಡಿಡಿಪಿಐ ಲತಾ ನಾಯಕ ತಿಳಿಸಿದ್ದಾರೆ.
ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಅಂಕೋಲಾ ಮಾರುಗದ್ದೆಯ ಸಂಜೀವ ಆರ್.ನಾಯಕ, ಭಟ್ಕಳ ಮೇಲಿನ ಶೇರುಗಾರಕೇರಿಯ ಮಹಾದೇವ ಜಟ್ಟಾ ನಾಯ್ಕ, ಹೊನ್ನಾವರ ಪಡುಕುಳಿ ಶಾಲೆಯ ಸುರೇಖಾ ಲಕ್ಷ್ಮೀನಾರಾಯಣ ಹೆಗಡೆ, ಕುಮಟಾ ಶೋಕನಮಕ್ಕಿಯ ನಿರ್ಮಲಾ ಆರ್.ನಾಯ್ಕ, ಕಾರವಾರ ನಿವಳಿ ಶಾಲೆಯ ಕೃಷ್ಣಾನಂದ ರಾಮಚಂದ್ರ ಗುನಗಾ ಆಯ್ಕೆಯಾಗಿದ್ದಾರೆ.

ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಅಂಕೋಲಾ ಅವರ್ಸಾದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಅರುಣ ಸಣ್ಣು ಶೆಡಗೇರಿ, ಭಟ್ಕಳ ವೆಂಕ್ಟಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ರೇವತಿ ಅಣ್ಣಪ್ಪ ಹಾವಳಿಮನೆ, ಹೊನ್ನಾವರ ಮಾವಿನಕುರ್ವಾದ ಸಾನಾಮೊಟಾ ಸಹಿಪ್ರಾ ಶಾಲೆಯ ನಿತ್ಯಾನಂದ ಕೃಷ್ಣ ನಾಯಕ, ಕುಮಟಾ ಗಂಗೆಕೊಳ್ಳದ ಉದಯ ಕೇಶವ ನಾಯಕ, ಕಾರವಾರ ಮೂಡ್ಲಮಕ್ಕಿ ಶಾಲೆಯ ಶಂಕರ ಮಾಣಿ ಹರಿಕಾಂತ ಆಯ್ಕೆಯಾಗಿದ್ದಾರೆ.
ಪ್ರೌಢಶಾಲಾ ವಿಭಾಗದಲ್ಲಿ ಅಗಸೂರು ಕೆಪಿಎಸ್ ಶಾಲೆಯ ದೈಹಿಕ ಶಿಕ್ಷಕ ರಾಜೇಂದ್ರ ಪುಂಡಲೀಕ ಕೇಣಿ, ಭಟ್ಕಳ ಬೆಳಕೆ ಸರ್ಕಾರಿ ಪ್ರೌಢಶಾಲೆಯ ಚಂದ್ರಶೇಖರ ಸುಬ್ಬ ಬೈಲೂರು, ಹೊನ್ನಾವರ ಮಂಕಿ ಸರ್ಕಾರಿ ಪ್ರೌಢಶಾಲೆಯ ರಾಹತ್ ಫಾತಿಮಾ ಎಚ್., ಕುಮಟಾ ಮಹಾತ್ಮಗಾಂಽ ಪ್ರೌಢಶಾಲೆಯ ಪಾಂಡುರAಗ ಸುಬ್ರಾಯ ವಾಘ್ರಎಕರ್ , ಕಾರವಾರ ಸರ್ಕಾರಿ ಪ್ರೌಢಶಾಲೆಯ ಮೀನಾಕ್ಷಿ ಬೀರಣ್ಣ ನಾಯಕ ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net