

ಬೈಂದೂರು: ಜಡ್ಕಲ್ ಗ್ರಾಮದ ಸಲ್ಕೋಡಿನ ಶೋಭಾ ಅವರು 2024-25ನೇ ಸಾಲಿನ ಬೆಂಗಳೂರು ದಕ್ಷಿಣ ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಗೊಂಡಿದ್ದು, ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಪ್ರಸ್ತುತ ಆನೇಕಲ್ ತಾಲೂಕಿನ ಇಂಡ್ಲಪಾಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸಹಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ಕರುನಾಡ ಕನ್ನಡ ಕಲಾಸಿರಿ ಬಳಗ ಕೊಡ ಮಾಡುವ ಉತ್ತಮ ಸಾಧಕ ಶಿಕ್ಷಕ ಪ್ರಶಸ್ತಿ ಸಹ ಶೋಭಾ ಪಡೆದಿದ್ದರು. ಕುಂದಾಪುರ ತಾಲೂಕಿನ ಶಂಕರನಾರಾಯಣದ ರಂಗು ನಾಯ್ಕ ಮತ್ತು ತುಂಗಮ್ಮ ದಂಪತಿ ಪುತ್ರಿ, ಸಲ್ಕೋಡು ಸದಾಶಿವ ನಾಯ್ಕರ ಪತ್ನಿ.