ಎತ್ತಿನಟ್ಟಿ ಹಾಲು ಉತ್ಪಾದಕರ ವಾರ್ಷಿಕ ಸಭೆ

yethinatti
ಎತ್ತಿನಟ್ಟಿ ಹಾಲು ಉತ್ಪಾದಕರ ಸಂಘದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಂಘದ ಅಧ್ಯಕ್ಷ ಕೆ.ಪ್ರದೀಪ ಶೆಟ್ಟಿ ಮಾತನಾಡಿದರು
Published on

ಕೊಕ್ಕರ್ಣೆ: ಎತ್ತಿನಟ್ಟಿ ಹಾಲು ಉತ್ಪಾದಕರ ಸಂಘದ ವಾರ್ಷಿಕ ಸಾಮಾನ್ಯ ಸಭೆ ಸಂಘದ ವಠಾರದಲ್ಲಿ ಇತ್ತಿಚೆಗೆ ನಡೆಯಿತು. ಸಂಘದ ಅಧ್ಯಕ್ಷ ಕೆ.ಪ್ರದೀಪ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಒಕ್ಕೂಟದ ವಿಸ್ತರಣಾಧಿಕಾರಿ ಸರಸ್ವತಿ ಒಕ್ಕೂಟದ ಯೋಜನೆ ಸಹಿತ ಮಿನಿ ಡೇರಿ ಯೋಜನೆ, ರಾಸು ವಿಮೆ, ಗೋಬರ್ ಗ್ಯಾಸ್ ಅಳವಡಿಕೆಯ ಅನುದಾನ, ಪಶು ಆಹಾರ ಬಳಕೆ, ಜಾನುವಾರುಗಳಿಗೆ ಕಾಲಕಾಲಕ್ಕೆ ಲಸಿಕೆ, ಮಿನರಲ್ ಮಿಕ್ಚರ್ ಬಳಕೆ ಕುರಿತು ಮಾಹಿತಿ ನೀಡಿದರು. ಶಿರಿಯಾರ ವ್ಯವಸಾಯಿಕ ಸಂಘ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಶೆಟ್ಟಿ ಹೈನುಗಾರಿಕೆ ಸಾಲದ ಬಗ್ಗೆ ಮಾಹಿತಿ ನೀಡಿದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಕೇಶ್ ನಾಯಕ್ ವರದಿ ವಾಚಿಸಿದರು.

ಸಂಘದ ಉಪಾಧ್ಯಕ್ಷ ಗೋಪಾಲಕೃಷ್ಣ ಗಾಣಿಗ, ನಿರ್ದೇಶಕರಾದ ಶ್ರೀನಿವಾಸ ನಾಯಕ್, ಶಿವರಾಮ ಮರಕಾಲ, ಕೆ.ನಾರಾಯಣ ಪೂಜಾರಿ, ಗಣಪು ಪೂಜಾರಿ, ವೀರೇಂದ್ರ ಶೆಟ್ಟಿ, ವೇದಾವತಿ, ರಾಧಾ ಬಾ, ರಾಧಾ ಪೂಜಾರಿ, ಗಿರಿಜಾ ಪೂಜಾರಿ, ಬೇಬಿ ಎಸ್, ಸದಸ್ಯರು, ಹೈನುಗಾರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net