ಎಸ್‌ಎಸ್‌ಐಟಿಗೆ ಪ್ರಶಸ್ತಿ ಗರಿ

SSIT_CLG
Published on

ತುಮಕೂರು: ಆಧುನಿಕಮಟ್ಟದ ಪಠ್ಯ ಬೋಧನೆ ವ್ಯವಸ್ಥೆ ಮತ್ತು ಅತ್ಯಾಧುನಿಕ ಮೂಲಸೌಕರ್ಯಗಳನ್ನು ಪರಿಗಣಿಸಿ ತುಮಕೂರಿನ ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯಕ್ಕೆ ಪ್ರತಿಷ್ಠಿತ ರಾಷ್ಟ್ರೀಯ ಅತ್ಯುನ್ನತ ಶ್ರೇಷ್ಠ ಪ್ರಶಸ್ತಿ-2020 ಲಭಿಸಿದೆ.

ಶ್ರಿ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿನ ಸಂಶೋಧನೆ,ನವೀನ ರೀತಿಯ ಬೋಧನಾ ಶೈಲಿ, ಮೂಲಸೌಕರ್ಯಗಳು, ಸಮ್ಮೇಳನ, ಕಾರ್ಯಾಗಾರ ಮತ್ತು ಶೈಕ್ಷಣಿಕ ಸೌಲಭ್ಯ ಸೇರಿದಂತೆ ಸರ್ವಾಂಗೀಣ ಪ್ರಗತಿಯನ್ನು ಮಾನದಂಡವಾಗಿ ಪರಿಗಣಿಸಿ ಕಾಲೇಜಿಗೆ ಈ ಅತ್ಯುನ್ನತ ಶ್ರೇಷ್ಠ ರಾಷ್ಟ್ರ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ನ್ಯಾಷನಲ್ ಎಜುಕೇಷನ್ ಎಕ್ಸೆಲೆನ್ಸಿ ಸಂಸ್ಥೆಯ ಕಾರ್ಯದರ್ಶಿ ಎ.ಎನ್.ಸೋನಾಯ್ ತಿಳಿಸಿದ್ದಾರೆ.

ಕಾಲೇಜಿನ ಒಟ್ಟಾರೆ ಸರ್ವಾಂಗೀಣ ಪ್ರಗತಿಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ನ.27 ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ತರಬೇತಿ ಮತ್ತು ಆಯ್ಕೆ ವಿಭಾಗದ ಮುಖ್ಯಸ್ಥರಾದ ಡಾ. ಅಶೋಕ ಮೆಹ್ತಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಶ್ವಸಂಸ್ಥೆ ಹಾಗೂ ಕೇಂದ್ರ ಸರ್ಕಾರ ಜಂಟಿಯಾಗಿ 2004ರಲ್ಲಿ ಜಾರಿಗೆ ತಂದ ಟೆಕ್ಯೂಪ್(ಟೆಕ್ನಿಕಲ್ ಎಜುಕೇಷನ್ ಕ್ವಾಲಿಟಿ ಇಂಪ್ರೂವ್‌ಮೆಂಟ್ ಪ್ರೋಗ್ರಾಮ್)ಯೊಜನೆಯಡಿ ಆಯ್ಕೆಯಾದ ದೇಶದ 125 ಹಾಗೂ ರಾಜ್ಯದ 14 ಅತ್ಯುನ್ನತ ತಾಂತ್ರಿಕ ಮಹಾವಿದ್ಯಾಲಯಗಳಲ್ಲಿ ಸಿದ್ದಾರ್ಥ ತಾಂತ್ರಿಕ ಕಾಲೇಜು ಕೂಡ ಒಂದಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರಶಸ್ತಿ ಬಂದಿರುವುದು ಹೆಮ್ಮ ಸಂಗತಿ. ಶೈಕ್ಷಣಿಕವಾಗಿ ನಮ್ಮ ಜವಾಬ್ದಾರಿ ಹೆಚ್ಚಾಗಿದೆ. ಪ್ರಯೋಗಾಲಯ, ಆಧುನಿಕ ಸೌಲಭ್ಯವಿರುವ ತರಗತಿ ಕೊಠಡಿಗಳು

ಮತ್ತು ಅಧ್ಯಾಪಕ ವೃತ್ತಿ ನೈಪುಣ್ಯತೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಕಾಲೇಜನ್ನು ಆಯ್ಕೆ ಮಾಡಲಾಗಿದೆ.

ಡಾ.ಎಂ.ಎಸ್.ರವಿಪ್ರಕಾಶ್

ಪ್ರಾಂಶುಪಾಲ, ಎಸ್‌ಎಸ್‌ಐಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net