ವಿಶಾಲಾಕ್ಷಿ ಅತ್ಯುತ್ತಮ ಅಂಗನವಾಡಿ ಶಿಕ್ಷಕಿ

3
Published on

ಮಂಜೇಶ್ವರ: 2024ನೇ ಸಾಲಿನ ರಾಜ್ಯಮಟ್ಟದ ಶ್ರೇಷ್ಠ ಅಂಗನವಾಡಿ ಕಾರ್ಯಕರ್ತೆಯರಿಗಿರುವ ಅತ್ಯುತ್ತಮ ಅಂಗನವಾಡಿ ಶಿಕ್ಷಕಿ ಎಂಬ ಗೌರವವನ್ನು ಮೀಂಜ ಗ್ರಾಮ ಪಂಚಾಯಿತಿ ಕೋಳ್ಯೂರು ವಾರ್ಡ್‌ನ ದೈಗೋಳಿ ಅಂಗನವಾಡಿ ಶಿಕ್ಷಕಿ ವಿಶಾಲಾಕ್ಷಿ ಪಡೆದಿರುತ್ತಾರೆ. ಮಾರ್ಚ್ 8ರಂದು ತಿರುವನಂತಪುರದಲ್ಲಿ ಜರುಗಿದ ಸಮಾರಂಭದಲ್ಲಿ ಕೇರಳ ರಾಜ್ಯ ಮಹಿಳಾ ನಿಗಮದ ಅಧ್ಯಕ್ಷೆ ರೋಸಾಕುಟ್ಟಿ ಕೆ.ಸಿ.ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ದೈಗೋಳಿ ಅಡೆಕಳಕಟ್ಟೆ ನಿವಾಸಿ ವಿಶಾಲಾಕ್ಷಿ ಕಳೆದ 27 ವರ್ಷಗಳಿಂದ ಅಂಗನವಾಡಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ದೈಗೋಳಿ ಜ್ಞಾನೋದಯ ಸಮಾಜ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸಕ್ರಿಯ ಸದಸ್ಯೆಯಾಗಿ ಸೇವೆ ಸಲ್ಲಿಸುತ್ತಿರುವ ಇವರಿಗೆ ಜ್ಞಾನೋದಯ ಸಮಾಜ ಅಭಿನಂದನೆಗಳನ್ನು ಸಲ್ಲಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net