ನಾಳೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್​ ವ್ಯತ್ಯಯ

Power Cut
Published on

ಬೆಂಗಳೂರು: ವಾರ್ಷಿಕ ನಿರ್ವಹಣೆ ಕೆಲಸ ಇರುವ ಹಿನ್ನೆಲೆ 20/66/11 ಕೆವಿ ಮತ್ತಿಕೆರೆ ಉಪಕೇಂದ್ರದ ವ್ಯಾಪ್ತಿಯಲ್ಲಿ ಗುರುವಾರ (ಆ.29) ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ ವಿದ್ಯುತ್​ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಎಲ್​.ಜಿ.ಹಳ್ಳಿ, ಆರ್​.ಎಮ್​.ವಿ 2ನೇ ಹಂತ, ಸಂಜೀವಪ್ಪ ಕಾಲೊನಿ, ನ್ಯೂ ಬಿ.ಇ.ಎಲ್​ ರಸ್ತೆ, ಎಂ.ಎಸ್​.ಆರ್​ ನಗರ, ಮೋಹನ್​ ಕುಮಾರ್​ ನಗರ, ಪಂಪಾ ನಗರ, ಬಿ.ಕೆ.ನಗರ, ಬಾಂಬೆ ಡೈಯಿಂಗ್​ ರಸ್ತೆ, ಯಶವಂತಪುರ ಮೊದಲನೇ ಮುಖ್ಯ ರಸ್ತೆ, ಎಚ್​.ಎಂ.ಟಿ ಮುಖ್ಯ ರಸ್ತೆ, ಎಚ್​.ಎಂ.ಟಿ ಬಡಾವಣೆ, ಬೃಂದಾವನ ನಗರ, ಎಸ್​.ಬಿ.ಎಂ ಕಾಲೊನಿ, ಎಂ.ಆರ್​.ಜೆ ಕಾಲೊನಿ ಇನ್ನಿತರ ಕಡೆಗಳಲ್ಲಿ ವಿದ್ಯುತ್​ ವ್ಯತ್ಯಯ ಆಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net