ಬೆಸಗರಹಳ್ಳಿ ನಾಡಕಚೇರಿ ಹೊಸ ಕಟ್ಟಡಕ್ಕೆ ಕ್ರಮ

01M.D.R.2
ಮದ್ದೂರು ತಾಲೂಕಿನ ಬೆಸಗರಹಳ್ಳಿಯಲ್ಲಿ ಶಿಥಿಲಗೊಂಡಿರುವ ನಾಡಕಚೇರಿಗೆ ತಹಸೀಲ್ದಾರ್ ಸೋಮಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವುದು.
Published on

ಮದ್ದೂರು: ತಾಲೂಕಿನ ಬೆಸಗರಹಳ್ಳಿ ನಾಡ ಕಚೇರಿಗೆ ಹೊಸ ಕಟ್ಟಡ ನಿರ್ಮಾಣ ಮಾಡುವ ಸಂಬಂಧ ಜಿಲ್ಲಾಧಿಕಾರಿ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಸೋಮಶೇಖರ್ ಭರವಸೆ ವ್ಯಕ್ತಪಡಿಸಿದರು.

ವಿಜಯವಾಣಿ ಪತ್ರಿಕೆಯಲ್ಲಿ ಡಿ.1ರಂದು ‘ನಾಡಕಚೇರಿ ಕಟ್ಟಡ ಶಿಥಿಲ’ ಎಂಬ ಶೀರ್ಷಿಕೆಯಡಿಯಲ್ಲಿ ವಿಶೇಷ ವರದಿ ಪ್ರಕಟಗೊಂಡ ಬೆನ್ನಲ್ಲೇ ಶುಕ್ರವಾರ ತಹಸೀಲ್ದಾರ್ ಸೋಮಶೇಖರ್ ಬೆಸಗರಹಳ್ಳಿ ನಾಡಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.

ಪರಿಶೀಲನೆ ವೇಳೆ ಕಡತಗಳನ್ನು ಇಟ್ಟಿರುವ ಕೊಠಡಿ, ಕಚೇರಿ ಪಕ್ಕ ಬೆಳೆದಿರುವ ಗಿಡಗಂಟಿಗಳು ಸೇರಿದಂತೆ ಇಲ್ಲಿಯ ಸಮಸ್ಯೆಗಳನ್ನು ಗಮನಿಸಿ ಮಾತನಾಡಿ, ನಾಡ ಕಚೇರಿಯ ಸ್ಥಳ ಆರೋಗ್ಯ ಇಲಾಖೆಗೆ ಸೇರಿದ್ದು, ಆರೋಗ್ಯ ಇಲಾಖೆಯಿಂದ ನಮ್ಮ ಇಲಾಖೆ ಡಿನೋಟಿಫಿಕೇಷನ್ ಮಾಡಿಕೊಳ್ಳಬೇಕು. ಈ ಸಂಬಂಧ ಜಿಲ್ಲಾಧಿಕಾರಿ ಗಮನಕ್ಕೆ ತಂದು ಕಾನೂನು ಪ್ರಕಾರ ಶೀಘ್ರವಾಗಿ ಹೊಸ ನಾಡ ಕಚೇರಿ ನಿರ್ಮಾಣ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net