ಬಿಇಒ ವಿರುದ್ಧ ಕ್ರಮವಾಗಲಿ

5LNG01
ಲಿಂಗಸುಗೂರು ಎಸಿ ಕಚೇರಿ ಎಫ್‌ಡಿಸಿ ಅನುಪಮಾ ಸಿಂಗ್‌ಗೆ ಸಾಲಿಡಾರಿಟಿ ಯೂತ್ ಮೂಮೆಂಟ್ ಕರ್ನಾಟಕ ಸಂಘಟನೆ ಮುಖಂಡರು ಮನವಿ ಸಲ್ಲಿಸಿದರು. ಸಂಘಟನೆ ತಾಲೂಕು ಅಧ್ಯಕ್ಷ ಅಮ್ಜದ್ ಅಲಿ, ಪ್ರಮುಖರಾದ ನಯೀಮ್, ಅಬ್ದುಲ್ ಸತ್ತಾರ್, ಅಹ್ಮದ್, ಸದ್ದಾಂ ಹುಸೇನ್, ಸಲಾಂ, ಪಾಷಾ, ಬಾಬು, ನವಾಬ, ಅಹಮದ್ ಇದ್ದರು.
Published on

ಲಿಂಗಸುಗೂರು: ತಾಲೂಕಿನ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಕಳಪೆ ಶೂಗಳನ್ನು ಪೂರೈಕೆ ಮಾಡಿದ್ದು, ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸಾಲಿಡಾರಿಟಿ ಯೂತ್ ಮೂಮೆಂಟ್ ಕರ್ನಾಟಕ ಸಂಘಟನೆ ಮುಖಂಡರು ಎಸಿ ಕಚೇರಿ ಎಫ್‌ಡಿಸಿ ಅನುಪಮಾ ಸಿಂಗ್‌ಗೆ ಶನಿವಾರ ಮನವಿ ಸಲ್ಲಿಸಿದರು.

ಸರ್ಕಾರಿ ಶಾಲೆಗಳಲ್ಲಿ ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಪ್ರತಿವರ್ಷ ಸರ್ಕಾರ ಕೋಟ್ಯಂತರ ರೂ. ಖರ್ಚು ಮಾಡಿ ಶೂ- ಸಮವಸ್ತ್ರ ಸೇರಿ ಇತರೆ ಸಾಮಗ್ರಿಗಳನ್ನು ಪೂರೈಕೆ ಮಾಡುತ್ತಿದೆ.

ಆದರೆ ತಾಲೂಕಿನ ಹಲವಾರು ಸರ್ಕಾರಿ ಶಾಲೆಗಳಲ್ಲಿ ಎಸ್ಡಿಎಂಸಿ ರಚನೆಯಾಗದ ಕಾರಣ ಮುಖ್ಯಶಿಕ್ಷಕರು ಮನಬಂದಂತೆ ಆಡಳಿತ ನಡೆಸುವ ಜತೆಗೆ ಕಳಪೆ ಸಾಮಗ್ರಿಗಳನ್ನು ಒದಗಿಸಿ ಹಣ ಲೂಟಿ ಮಾಡುತ್ತಿದ್ದಾರೆ.

ಶಾಸಕ ಮಾನಪ್ಪ ವಜ್ಜಲ್ ಇತ್ತೀಚೆಗೆ ಮೊಟ್ಟೆ ವಿತರಣೆ ಕಾರ್ಯಕ್ರಮ ನಿಮಿತ್ತ ಕನ್ಯಾ ಪ್ರೌಢ ಶಾಲೆಗೆ ಭೇಟಿ ನೀಡಿದಾಗ ಕಳಪೆ ಶೂ ಮತ್ತು ಸಾಕ್ಸ್‌ಗಳನ್ನು ಕಂಡು ಸರ್ಕಾರ ಸಾಕಷ್ಟು ಹಣ ನೀಡುತ್ತಿದ್ದರೂ ಕಳಪೆ ಸಾಮಗ್ರಿಗಳನ್ನು ಏಕೆ ಖರೀದಿ ಮಾಡಿದ್ದೀರಿ ಎಂದು ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಶಾಲೆಯಲ್ಲಿ ಆರು ವರ್ಷಗಳಿಂದ ಎಸ್ಡಿಎಂಸಿ ರಚನೆಯಾಗಿಲ್ಲ.

800 ಮಕ್ಕಳ ಇದ್ದ ಸಂಖ್ಯೆ 400ಕ್ಕೆ ಇಳಿಕೆಯಾಗಿದೆ. ವಿಚಾರಿಸಿದರೆ ಉಡಾಫೆ ಉತ್ತರ ನೀಡುತ್ತಾರೆ. ಶೂ ಪೂರೈಕೆಯಲ್ಲಿ ಭಾಗೀಯಾದ ಮುಖ್ಯಶಿಕ್ಷಕ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಂಘಟನೆ ಮುಖಂಡರು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net