ಬಾಗಿದ್ದ ವಿದ್ಯುತ್ ಕಂಬ ತೆರವು

8-KGL-3,,
Published on

ಕೊಳ್ಳೇಗಾಲ: ಪಟ್ಟಣದ ಹಳೇ ಕುರುಬರ ಬೀದಿಯ ರಸ್ತೆಯಲ್ಲಿ ಬಾಗಿದ್ದ ವಿದ್ಯುತ್ ಕಂಬವನ್ನು ಗುರುವಾರ ಸೆಸ್ಕ್ ಸಿಬ್ಬಂದಿ ಬದಲಿಸಿ ನೂತನ ಕಂಬ ನೆಟ್ಟರು.

‘ರಸ್ತೆಗೆ ಬಾಗಿದ ವಿದ್ಯುತ್ ಕಂಬದಿಂದ ಅಪಾಯ’ ಎಂಬ ಶೀರ್ಷಿಕೆಯಡಿ ಇತ್ತೀಚೆಗೆ ವಿಜಯವಾಣಿ ಪತ್ರಿಕೆ ವರದಿ ಮಾಡಿತ್ತು. ಹಳೇ ಕುರುಬರ ಬೀದಿಯ ಪ್ರಮುಖ ರಸ್ತೆಯಲ್ಲಿ 11 ಕೆ.ವಿ ವಿದ್ಯುತ್ ಕಂಬ ರಸ್ತೆಗೆ ವಾಲಿದ್ದು ಕಂಬದಲ್ಲಿ ಬಿರುಕು ಬಿಟ್ಟಿದೆ. ಈ ರಸ್ತೆಯಲ್ಲಿ ಅಂಗಡಿ, ಮಳಿಗೆಗಳು, ಮನೆ ಗಳಿವೆ. ದಿನವಿಡಿ ಜನ ಸಾಮಾನ್ಯರ ಸಂಚಾರ ಹೆಚ್ಚಾಗಿರುತ್ತೆ. ಒಂದು ವೇಳೆ ಬಿರುಗಾಳಿ ಸಮೇತ ಮಳೆ ಬಂದರೆ ಮನೆ ನಿವಾಸಿಗಳು ಹಾಗೂ ಅಂಗಡಿ ಮಾಲೀಕರಿಗೆ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಿದೆ ಎಂದು ಸೆಸ್ಕ್ ಅಧಿಕಾರಿಗಳ ಗಮನ ಸೆಳೆಯಲಾಗಿತ್ತು.

ಈ ಹಿನ್ನೆಲೆ ಎಚ್ಚೆತ್ತ ಸೆಸ್ಕ್ ಎಇಇ ರಾಜು ನೇತೃತ್ವದಲ್ಲಿ ವಾಲಿದ್ದ ಕಂಬ ತೆರವುಗೊಳಿಸಿ ಬದಲಿ ಕಂಬ ಅಳವಡಿಸಿದ್ದಾರೆ. ನೂತನ ಕಂಬವನ್ನು ಹಾಕಿದ ಮೇಲೆ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಪ್ರತಿಕೆಯ ವರದಿಗೆ ಹಳೇ ಕುರುಬರ ಬೀದಿಯ ವಾರ್ಡ್ ಸದಸ್ಯೆ ಮಾನಸ ಪ್ರಭುಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net