

ಬೆಂಗಳೂರು: ನಮ್ಮ ಮೆಟ್ರೋ ಗುಲಾಬಿ ಮಾರ್ಗದಲ್ಲಿ ನಿರ್ಮಾಣಗೊಂಡಿರುವ ನಗರದ ಮೊದಲ "ಡಬಲ್ ಡೆಕರ್' ಮಾರ್ಗ ಸದ್ಯದಲ್ಲೇ ಸಂಚಾರಕ್ಕೆ ಮುಕ್ತವಾಗಲಿದ್ದು, ಅಂತಿಮ ಹಂತದ ಪರಿಶೀಲನೆ ನಡೆಯುತ್ತಿದೆ.
ಆರ್.ವಿ.ರಸ್ತೆ - ಬೊಮ್ಮಸಂದ್ರ ಮಾರ್ಗದಲ್ಲಿ ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ಬೋರ್ಡ್ ಜಂಕ್ಷನ್ವರೆಗೆ 3.3 ಕಿ.ಮೀ. ದೂರ ಹಾಗೂ ಮೆಟ್ರೋ ರೈಲು ಸಂಚರಿಸುವ ಮಾದರಿಯಲ್ಲಿ ಮೇಲ್ಸೇತುವೆ ನಿರ್ಮಿಸಲಾಗಿದೆ.
ಡಬಲ್ ಡೆಕರ್ ರಸ್ತೆಯ ಮೇಲೆ ಒಮ್ಮೆ ವಾಹನಗಳು ಹತ್ತಿದರೆ, ಮಧ್ಯದಲ್ಲಿ ಇಳಿಯಲು ಸಾಧ್ಯವಿಲ್ಲ. ಬಸ್, ಕಾರು ಸೇರಿ ಎಲ್ಲ ಮಾದರಿಯ ವಾಹನಗಳು ಇದರಲ್ಲಿ ಸಂಚರಿಸಬಹುದು. ಈ ಮಾರ್ಗ ವಾಹನದಟ್ಟಣೆ ನಿಯಂತ್ರಿಸಲಿದೆ. ಎರಡನೇ ಅಂತಸ್ತಿನಲ್ಲಿ ಮೆಟ್ರೋ ರೈಲು ಸಂಚರಿಸಲಿದೆ. ನೆಲ ಅಂತಸ್ತಿನಲ್ಲಿ ತ್ರಿಪಥ ಮಾರ್ಗವಿದ್ದು, ಎಂದಿನಂತೆ ವಾಹನ ಸಂಚಾರ ಇರಲಿದೆ.
ಬೆಂಗಳೂರು: ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಜೂ.16ರಿಂದ ಚಾಲಕರಹಿತ ಎಂಜಿನ್ ಹೊಂದಿರುವ ರೈಲು ಪ್ರಾಯೋಗಿಕವಾಗಿ ಸಂಚರಿಸುತ್ತಿದ್ದು, ವಿವಿಧ ಪರೀಕ್ಷೆಗಳು ನಡೆಯುತ್ತಿವೆ. ತಾಂತ್ರಿಕ ತಜ್ಞರು ಪರಿಶೀಲಿಸುತ್ತಿದ್ದು, ಇನ್ನೂ ಮೂರ್ನಾಲ್ಕು ತಿಂಗಳು ವಿವಿಧ ಪರೀೆಗಳು ನಡೆಯಲಿವೆ. ಸದ್ಯ ಟ್ರಾಕ್ಷನ್, ಬ್ರೇಕಿಂಗ್, ವೇಗ ಇತ್ಯಾದಿ ಪರೀಕ್ಷೆಗಳು ನಡೆಯುತ್ತಿವೆ.
ಬಳಿಕ ಹಂತಹಂತವಾಗಿ ಸಿಗ್ನಲಿಂಗ್, ದೂರಸಂಪರ್ಕ, ವಿದ್ಯುತ್ ಸರಬರಾಜು, ರೈಲು ಒಂದು ನಿಲ್ದಾಣದಿಂದ ಇನ್ನೊಂದು ನಿಲ್ದಾಣಕ್ಕೆ ತಲುಪುವ ಸಮಯ ಇತ್ಯಾದಿ ಪರೀಕ್ಷೆಗಳು ನಡೆಯಲಿವೆ. ಬಳಿಕ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರ ತಂಡ ಪರೀಶಿಲಿಸಿ ವರದಿ ನೀಡಲಿದೆ. ಬಳಿಕಷ್ಟೇ ಈ ಮಾರ್ಗದಲ್ಲಿ ಮೆಟ್ರೋ ವಾಣಿಜ್ಯ ಸಂಚಾರ ಆರಂಭವಾಗಲಿದೆ.