ಪಾದಯಾತ್ರೆ ಕೈಬಿಟ್ಟ ನೀರಗಂಟಿಗಳು

*ಸಚಿವ ಬಾಲಕೃಷ್ಣ ಭರವಸೆ ಹಿನ್ನೆಲೆಯಲ್ಲಿ ಪ್ರತಿಭಟನೆ ವಾಪಾಸ್​ *ಶ್ರೀವೇ ಸಿಎಂ ಸಭೆ
ನೆಲಮಂಗಲದ ಗೋಪಿವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನೀರು ಸರಬರಾಜುದಾರರ ಮನವಿಯನ್ನು ಪೌರಾಡಳಿತ ಸಚಿವ ಎಚ್​.ಸಿ.ಬಾಲಕೃಷ್ಣ ಸ್ವೀಕರಿಸಿದರು.
ನೆಲಮಂಗಲದ ಗೋಪಿವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನೀರು ಸರಬರಾಜುದಾರರ ಮನವಿಯನ್ನು ಪೌರಾಡಳಿತ ಸಚಿವ ಎಚ್​.ಸಿ.ಬಾಲಕೃಷ್ಣ ಸ್ವೀಕರಿಸಿದರು.
Published on: 

ನೆಲಮಂಗಲ : ಪೌರಾಡಳಿತ ಸಚಿವ ಎಚ್​.ಸಿ.ಬಾಲಕೃಷ್ಣ ಅವರು ಮನವಿ ಸ್ವೀಕರಿಸಿದ ಹಿನ್ನೆಲೆಯಲ್ಲಿ ನೀರಗಂಟಿಗಳು ಪಾದಯಾತ್ರೆ ಕೈಬಿಟ್ಟರು.

ನೇರ ನೇಮಕಾತಿ ಹಾಗೂ ನೇರ ವೇತನ ಪಾವತಿ ವ್ಯಾಪ್ತಿಗೆ ಒಳಪಡಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಪೌರಸೇವಾ ನೀರು ಸರಬರಾಜು ನೌಕರರ ಮಹಾಸಂಘದ ನೇತೃತ್ವದಲ್ಲಿ ಸಾವಿರಾರು ನೀರುಗಂಟಿಗಳು ಸೆ.21ರಂದು ತುಮಕೂರಿನ ಸಿದ್ಧಗಂಗಾ ಮಠದಿಂದ ಮುಖ್ಯಮಂತ್ರಿ ನಿವಾಸದವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದರು. ಸೆ.24ರ ರಾತ್ರಿ ನೆಲಮಂಗಲದ ಗೋಪಿ ವೆಂಕಟೇಶ್​ ಕಲ್ಯಾಣ ಮಂಟಪದಲ್ಲಿ ಪ್ರತಿಭಟನಾಕಾರರು ತಂಗಿದ್ದರು. ಶುಕ್ರವಾರ ಬೆಂಗಳೂರು ಕಡೆ ಪ್ರತಿಭಟನಾಕಾರರು ಪಾದಯಾತ್ರೆ ಮುಂದುವರಿಸುವ ಮುನ್ನ ಬಾಲಕೃಷ್ಣ, ಕಲ್ಯಾಣ ಮಂಟಪಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದರು.

ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಸಂಬಳ ನೀಡಲು ಕಾನೂನು ವ್ಯಾಪ್ತಿಯಲ್ಲಿ ಕ್ರಮವಹಿಸಲು

ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಮುಂದಿನ ಒಂದು ವಾರದೊಳಗಾಗಿ ಸಂಘದ ಪದಾಧಿಕಾರಿ, ಅಧಿಕಾರಿ ಸೇರಿ ಸರ್ಕಾರದ ಕಾರ್ಯದರ್ಶಿಗಳೊಂದಿಗೆ ಸಭೆ ಕರೆದು ತೀಮಾರ್ನ ಕೈಗೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಸಂಘದ ರಾಜ್ಯಾಧ್ಯಕ್ಷ ಪಾವಗಡ ಶ್ರೀರಾಮ್​ ಮಾತನಾಡಿ, ಮಂತ್ರಿಗಳು ನೌಕರರ ಮನವಿಗೆ ಉತ್ತಮವಾಗಿ ಸ್ಪಂದಿಸಿದ್ದಾರೆ. ನೌಕರರ ಬೇಡಿಕೆ ಈಡೇರಿಸುವಂತೆ ಆಶ್ವಾಸನೆಯನ್ನೂ ನೀಡಿದ್ದು, ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ, ನೌಕರರ ಬೇಡಿಗೆ ಈಡೇರಿಸುತ್ತಾರೆಂದು ನಂಬಿಕೆಯಿಟ್ಟು ಪಾದಯಾತ್ರೆ ಕೈ ಬಿಡಲಾಗಿದೆ. ರಾಜ್ಯ ಸಮಿತಿ ಪದಾಧಿಕಾರಿಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸುವೆವು ಎಂದರು.

ನಗರಸಭೆ ಅಧ್ಯಕ್ಷ ಎನ್​.ಗಣೇಶ್​, ಪೌರಾಯುಕ್ತ ಗಂಗಾಧರ್​, ಕಂದಾಯ ಅಧಿಕಾರಿ ಸುಧಾಕರ್​, ನೀರಗಂಟಿಗಳ ಮಹಾಸಂಘದ ಉಪಾಧ್ಯಕ್ಷ ಪುರುಷೋತ್ತಮ್​, ಮಂಜುನಾಥ್​, ಸತೀಶ್​, ರಾಜ್ಯ ಪ್ರಧಾನ ಕಿರಣ್​ ಕುಮಾರ್​, ಕಾರ್ಯದರ್ಶಿ ರಮೇಶ್​, ನವೀನ್​ ಖಜಾಂಚಿ ನವೀನ್​, ಮುಖಂಡ ಮಹಂತೇಶ್​, ನಟರಾಜು, ಲೋಕೇಶ್​, ಕೆ.ನಟರಾಜು, ಕೃಷ್ಣಪ್ಪ ಅಮರ್​ನಾಥ್​, ಮಂಜುನಾಥ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net