ದೇವನಹಳ್ಳಿ ತಾಲೂಕು ಸಾದಹಳ್ಳಿ ಗ್ರಾಮದ ನಿವಾಸಿ ಮೋಹನಕುಮಾರ (33), ಸುವನ್ (28) ಹಾಗೂ ಸಾಗರ್ (23) ಮೃತರು. ಇನ್ನು ಬಸ್ ಚಾಲಕ ಶಿವಕುಮಾರ್ ಗಂಭೀರವಾಗಿ ಗಾಯಗೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರು ರಾಜಾಜಿನಗರದ ವಿಮಲಾ (43), ಶ್ರೀನಿವಾಸಪುರದ ಅಜಯಕುಮಾರ್ ್ಡ (28), ವೀಣಾ (27) ಎಂಬುವವರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಆಕಾಶ್ ಆಸ್ಪತ್ರೆಗೆ ದಾಖಲಿಸಲಾಗಿದೆ.