ಹಂಚಿಕುಪ್ಪೆ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯೆ ಚೈತ್ರಾ ರವಿ ಅವರ ಮನೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದೇವರ ಉತ್ಸವ ನಿಮಿತ್ತ ಬಂದಿದ್ದ ಮುನಿರಾಜು ಮೂವರು ಹುಡುಗರೊಂದಿಗೆ ಬಾವಿಗೆ ಈಜಲು ತೆರಳಿದ್ದರು. ಈ ವೇಳೆ ಮುನಿರಾಜು ನೀರಿನಲ್ಲಿ ಮುಳುಗಿದ್ದು, ಜತೆಯಲ್ಲಿದ್ದ ಇನ್ನಿಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬದವರು ಈಗ ಕಣ್ಣೀರಿಡುತ್ತಿದ್ದಾರೆ.