ರಾಜ್ಯ ರೈತ ಸಂದ ತಾಲೂಕು ಅಧ್ಯಕ್ಷ ಸತೀಶ್ ಮಾತನಾಡಿ, ಚಿಲಂದವಾಡಿ ಕೂಲಿ ಕಾರ್ಮಿಕ ಶಿವುಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಕುಟುಂಬಕ್ಕೆ ಆಸರೆಯಾಗಿದ್ದ ಶಿವು ಅವರ ಸಾವಿನಿಂದ ಕುಟುಂಬ ಅತಂತ್ರಗೊಂಡಿದೆ. ಸರ್ಕಾರ ನಿಗದಿತ ಪರಿಹಾರಕ್ಕಿಂತ ಹೆಚ್ಚಿನ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.