ಟನೆ ಹಿನ್ನೆಲೆ: ನಗರದ ಬಾಲಗೇರಿಯಲ್ಲಿ ಮನೆ ಪಕ್ಕದಲ್ಲಿದ್ದ ಜಾಗದಲ್ಲಿ ತಬಸ್ಸುಮ್ ಸೊಪ್ಪು ಮತ್ತು ತರಕಾರಿ ಬೆಳೆಯುತ್ತಿದ್ದರು. ಅದೇ ಜಾಗದಲ್ಲಿ ಶ್ರೀನಿವಾಸ್ ದನಗಳನ್ನು ಮೇಯಲು ಬಿಡುತ್ತಿದ್ದ. ಈ ಕಾರಣಕ್ಕೆ ಎರಡು ತಿಂಗಳ ಹಿಂದೆ ಇಬ್ಬರ ನಡುವೆ ಜಗಳ ನಡೆದಿತ್ತು. ಈ ವೇಳೆ ಊರಿನ ಹಿರಿಯರು ಶ್ರೀನಿವಾಸ್ಗೆ ಬುದ್ಧಿ ಹೇಳಿ ಸಾವಿರ ರೂ. ದಂಡ ವಿಧಿಸಿದ್ದರು. ಅಂದಿನಿಂದ ತಬಸ್ಸುಮ್ ವಿರುದ್ಧ ದ್ವೇಷ ಬೆಳೆಸಿಕೊಂಡಿದ್ದ ಈತ, ಜೂ.1ರಂದು ಸಂಜೆ ಮತ್ತೆ ಅದೇ ಜಾಗದಲ್ಲಿ ಹಸುಗಳನ್ನು ಮೇಯಲು ಬಿಟ್ಟಿದ್ದ. ಅದನ್ನು ಪ್ರಶ್ನಿಸಿದ ತಬಸ್ಸುಮ್ ಅವರನ್ನು ಮನಸೋ ಇಚ್ಛೆ ಥಳಿಸಿದ್ದ.