ಬೈಕ್ ಗೆ ಡಿಕ್ಕಿಯೊಡೆದ ಕಾರು ಮಹಿಳೆ ಸಾವು

ಅಪಘಾತದಲ್ಲಿ ಬೈಕ್ ಜಖಂ ಆಗಿರುವುದು
ಅಪಘಾತದಲ್ಲಿ ಬೈಕ್ ಜಖಂ ಆಗಿರುವುದು
Published on

ಪ್ರಮುಖ ಮುಖ್ಯಾಂಶಗಳು

  • ಹೊಸ ವರ್ಷದಂದೇ ದುರ್ಘಟನೆ
  • ಬೈಕ್​ಗೆ ಡಿಕ್ಕಿಯೊಡೆದ ಕಾರು
  • ಮಹಿಳೆ ಸ್ಥಳದಲ್ಲೇ ಸಾವು
ರಾಮನಗರ: ಹೊಸ ವರ್ಷದ ಮೊದಲ ದಿನವೇ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಹಿಳೆ ಮೃತಪಟ್ಟು, ಪುಟ್ಟ ಮಗು ಮತ್ತು ವ್ಯಕ್ತಿಯೊಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ಮಾಗಡಿ ತಾಲೂಕು ಕುದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.
ಕುಣಿಗಲ್ ನಿಂದ ಬೆಂಗಳೂರಿಗೆ ಬೈಕ್​ನಲ್ಲಿ ರಮೇಶ್​ ಎಂಬುವರು ತಮ್ಮ ಪತ್ನಿ ಅಶ್ವಿನಿ ಮತ್ತು ಪುತ್ರ ಯುವನ್ ನೊಂದಿಗೆ ತೆರಳುತ್ತಿದ್ದರು. ಕುಡಿತ ಮತ್ತಿನಲ್ಲಿ ಕಾರು ಚಾಲನೆ ಮಾಡುತ್ತಿದ್ದ ವ್ಯಕ್ತಿಯ ನಿಯಂತ್ರಣ ಪತ್ನಿ ಪಲ್ಟಿಯಾಗಿ ಲಕ್ಕೇನಹಳ್ಳಿಯ ಬಳಿ ರಸ್ತೆ ವಿಭಜಕವನ್ನು ದಾಟಿ ಎದುರಿಗೆ ಬರುತ್ತಿದ್ದ ಬೈಕ್​ಗೆ ಡಿಕ್ಕಿಯೊಡೆದಿದೆ.
ಡಿಕ್ಕಿಯೊಡೆದ ರಭಸಕ್ಕೆ ಅಶ್ವಿನಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ರಮೇಶ್​ ಹಾಗೂ ಒಂದು ವರ್ಷ ಯುವನ್​ ಅವರಿಗೆ ತೀವ್ರ ಗಾಯಗಳಾಗಿದ್ದು, ಇವರನ್ನು ತಕ್ಷಣವೇ ನೆಲಮಂಗಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಸಂಬಂಧ ಕಾರು ಚಾಲಕನನ್ನು
ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net