

"ಕೆರೆಯ ಹೂಳು ಎತ್ತುವುದು ಇನ್ನೂ ಪೂರ್ಣವಾಗಿಲ್ಲ. ಈಗಲೇ ಕಾಮಗಾರಿ ಸ್ಥಗಿತವಾಗಿದೆ. ಈ ಬಗ್ಗೆ ಕೆರೆ ಅಭಿವೃದ್ಧಿ ಜವಾಬ್ದಾರಿ ಹೊತ್ತಿರುವವರಾಗಲಿ, ಸಂಬಂಧಪಟ್ಟ ಅಧಿಕಾರಿಗಳಾಗಲಿ ಸಮರ್ಪಕ ಉತ್ತರ ನೀಡುತ್ತಿಲ್ಲ. ನಮಗೆ ಸಾಕಷ್ಟು ಅನುಮಾನಗಳು ಮೂಡುತ್ತಿವೆ. ಶ್ರೀವೇ ಜಿಲ್ಲಾಧಿಕಾರಿಗಳು ಹಾಗೂ ಶಾಸಕರ ಗಮನಕ್ಕೂ ತರಲಾಗುವುದು. ಕಾಮಗಾರಿ ಆರಂಭ ಮಾಡದಿದ್ದರೆ ಹೋರಾಟ ಕೈಗೊಳ್ಳುತ್ತೇವೆ.
— > ಧರಣೇಶ್, ಸ್ಥಳಿಯ ನಿವಾಸಿ
ಶೆಟ್ಟಿಹಳ್ಳಿ ಕೆರೆಯಲ್ಲಿ ಭಾರಿ ಪ್ರಮಾಣದಲ್ಲಿ ಹೂಳು ತುಂಬಿದ್ದು, ನಿರಂತರವಾಗಿ ಮಳೆ ಸುರಿದ ಹಿನ್ನೆಲೆಯಲ್ಲಿ ಹೂಳು ಮೇಲೆತ್ತುವ ಕಾಮಗಾರಿಗೆ ಅಡಚಣೆಯಾಯಿತು. ಇದರ ನಡುವೆಯೂ ಹಲವು ಕೆಲಸಗಳನ್ನು ಪೂರ್ಣಗೊಳಿಸಿದ್ದೇವೆ. ಡಿಸೆಂಬರ್ ತಿಂಗಳಲ್ಲಿ ಕಾಮಗಾರಿಗೆ ಮತ್ತೆ ಚಾಲನೆ ನೀಡಲಾಗುವುದು. ಯಾವುದೇ ಆತಂಕದ ಅವಶ್ಯಕತೆ ಇಲ್ಲ. ಕೆರೆಯನ್ನು ಪುನಶ್ಚೇತನಗೊಳಿಸಿ, ಸಮಗ್ರವಾಗಿ ಅಭಿವೃದ್ಧಿಪಡಿಸುವುದು ನಮ್ಮ ಹೊಣೆ.
— > ಡಾ.ಆನಂದ್ ಮಲ್ಲಿಗವಾಡ ಲೇಕ್ ಮ್ಯಾನ್ ಆ್ ಇಂಡಿಯಾ"ಮಳೆ ಕಾರಣದಿಂದ ಶೆಟ್ಟಿಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿ ನಿರ್ವಹಿಸಲು ಸಾಧ್ಯವಿಲ್ಲದೆ ಗುತ್ತಿಗೆದಾರರು ಕೆಲಸ ನಿಲ್ಲಿಸಿದ್ದಾರೆ. ಡಿಪಿಆರ್ನಲ್ಲಿ ಏನೇನೂ ನಮೂದಿಸಿದೆಯೋ ಅದೆಲ್ಲವನ್ನೂ ಕಾಮಗಾರಿ ಜವಾಬ್ದಾರಿ ತೆಗೆದುಕೊಂಡಿರುವವರು ಪೂರ್ಣಗೊಳಿಸಬೇಕು. ಆ ಬಳಿಕವಷ್ಟೇ ಕಾಮಗಾರಿಗೆ ಹಣ ಬಿಡುಗಡೆ ಮಾಡುತ್ತೇವೆ. ಹಾಗಾಗಿ ಅಭಿವೃದ್ಧಿ ಕಾರ್ಯವನ್ನು ಅರ್ಧಕ್ಕೆ ನಿಲ್ಲಿಸಲು ಸಾಧ್ಯವೇ ಇಲ್ಲ.
— > ಮಹೇಂದ್ರ ಪೌರಾಯುಕ್ತ, ನಗರಸಭೆ ಚನ್ನಪಟ್ಟಣ.