ಕನಕಪುರ: ನಗರದ ಮೈಸೂರು ರಸ್ತೆಯಲ್ಲಿ ಆದಿತ್ಯ ಕಾಲೇಜಿನ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಯೊಬ್ಬ ಕಾಲೇಜು ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಸಂಜೆ ಸಂಭವಿಸಿದೆ.
ತಾಲೂಕಿನ ಕೋಡಿಹಳ್ಳಿ ಬೇಕರಿ ಮಾಲೀಕ ಮಹದೇವ ಪ್ರಭುರವರ ಪುತ್ರ ಶ್ರೀನಿವಾಸ(18) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಯಾಗಿದ್ದಾನೆ. ಆದಿತ್ಯ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಶ್ರೀನಿವಾಸ್ ಮಂಗಳವಾರ ಎಂದಿನಂತೆ ಕಾಲೇಜಿಗೆ ಬಂದಿದ್ದಾನೆ.
ಕಾಲೇಜು ಮುಗಿದ ಬಳಿಕ ಸಂಜೆ 5.30ರಲ್ಲಿ ಕಾಲೇಜಿನ 5ನೇ ಮಹಡಿಗೆ ತೆರಳಿ ಮೇಲಿಂದ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೆಳಗೆ ಬಿದ್ದ ಈತನನ್ನು ಕೂಡಲೇ ಕಾಲೇಜು ಸಿಬ್ಬಂಧಿ ಹಾಗೂ ನಗರ ಪೋಲಿಸರು ಹಾರೋಹಳ್ಳಿ ಸಮಿದದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಎರಡು ಕಾಲುಗಳು ಮಜುರಿದಿದ್ದು ಗಂಭೀರ ಗಾಯಗೊಂಡಿದ್ದ ಈತನನ್ನು ಅಲ್ಲಿಂದ ಬೆಂಗಳೂರಿನ ಮಣಿಪಾಲ್ ಆಸ್ಪತೆಗೆ ಹೆಚ್ಚಿನ ಚಿಕಿತ್ಸೆ ದಾಖಲಿಸಲಾಗಿತ್ತು. ರಾತ್ರಿ 11.30ರ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಮೊಬೈಲ್ ಅನ್ನು ಹೆಚ್ಚಾಗಿ ಬಳಸುತ್ತಿದ್ದ ಕಾರಣ ತಂದೆ , ತಾಯಿ ಬಿದ್ದಿ ಮಾತು ಹೇಳಿದದ್ದರು. ಇದರಿಂದ ಬೇಸರಗೊಂಡಿದ್ದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪಾಲಕರು ನಗರ ಠಾಣೆಗೆ ದೂರು ನೀಡಿದ್ದಾರೆ. ಯು.ಡಿ.ಆರ್ ಪ್ರಕರಣ ದಾಖಲಿಸಿಕೊಂಡಿರುವ ನಗರ ಪೋಲಿಸರು ಮುಂದಿನ ಕ್ರಮ ಕೈಗೊಂಡಿದ್ದಾನೆ.
ವಿದ್ಯಾರ್ಥಿಯ ಪಾಲಕರು ಮೂಲತಃ ಚಾಮನಗರ ಜಿಲ್ಲೆ ಹನ್ನೂರು ತಾಲೂಕು ದಂಟಹಳ್ಳಿ ಗ್ರಾಮದವರಾಗಿದ್ದು, ಕನಕಪುರ ತಾಲೂಕಿನ ಕೋಡಿಹಳ್ಳಿಗೆ ವ್ಯಾಪಾರಕ್ಕಾಗಿ ಬಂದು ನೆಲೆಸಿದ್ದರು. ಮೃತನ ಸ್ವಗ್ರಾಮ ದಂಟಹಳ್ಳಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.