ಗ್ರಾಮದ ಅಂಚೆ ಇಲಾಖೆ ಅಧಿಕಾರಿ ಉಮೇಶ್ ಅವರ ಪುತ್ರ ವಿಶಾಲ್ ಮೇ 27ರಂದು ಕೆಂಪನಹಳ್ಳಿಯಿಂದ ಟ್ರ್ಯಾಕ್ಟರ್ನಲ್ಲಿ ಎಂ.ಸ್ಯಾಂಡ್ ಕಲ್ಲಿನಪುಡಿ ತರುತ್ತಿದ್ದ ವೇಳೆ ಬೆಂಗಳೂರು&ಮೈಸೂರು ಸರ್ವೀಸ್ ರಸ್ತೆ ಚಾಮುಂಡೀಪುರ ಬಳಿ ಬಡಾವಣೆಗೆ ತಿರುವು ಪಡೆಯಲು ಎತ್ತರ ರಸ್ತೆಯಲ್ಲಿ ಸಾಗುವಾಗ ಟ್ರ್ಯಾಕ್ಟರ್ ಇಂಜಿನ್ ಮೇಲೆ ಎತ್ತಿದ ಪರಿಣಾಮ ಹೊಟ್ಟೆಗೆ ಸ್ಟೇರಿಂಗ್ ತಗುಲಿ ಹೊಟ್ಟೆಗೆ ಗಂಭೀರ ಗಾಯವಾಗಿತ್ತು. ವಿಶಾಲ್ನನ್ನು ಕೂಡಲೇ ಮನೆಯವರು ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಲಿಸಿಲ್ಲ ಎನ್ನಲಾಗಿದೆ. ಮೃತದೇಹವನ್ನು ರಾಮನಗರ ಜಿಲ್ಲಾಸ್ಪತ್ರೆಗೆ ತಂದು, ಇಲ್ಲಿ ಮರಣೋತ್ತರ ಪರೀೆಗೆ ಒಳಪಡಿಸಿ, ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.