ಮಾರ್ಗಸೂಚಿ ಇಲ್ಲದೆ ಹಳಿತಪ್ಪಿದ ವಿಬಿ ಜಿ ರಾಮ್ ಜಿ

ನರೇಗಾ ಕಾಮಗಾರಿಯ ಸಂಗ್ರಹ ಚಿತ್ರ
ನರೇಗಾ ಕಾಮಗಾರಿಯ ಸಂಗ್ರಹ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಯುಕ್ತಧಾರ ಪೋರ್ಟ್ಲ್‌ನಲ್ಲಿ ಕಾಮಗಾರಿಗೆ ಸಿಗದ ಅನುಮೋದನೆ
  • ನೂತನ ವರ್ಷದಲ್ಲಿ ಆರಂಭವಾಗದ ಕಾಮಗಾರಿಗಳು
  • ಕೆಲಸವಿಲ್ಲದೆ ಕಾರ್ಮಿಕರ ಪರದಾಟ
ರಾಮನಗರ
ಪ್ರಸಕ್ತ ಸಾಲಿನಿಂದ ಮನರೇಗಾ ಬದಲಿಸಿ ವಿಬಿ ಜಿ ರಾಮ್ ಜಿ ಅನುಷ್ಠಾನವನ್ನು ಕೇಂದ್ರ ಸರ್ಕಾರ ಮಾಡಿದೆ. ಆದರೆ ಸ್ಪಷ್ಟ ಮಾರ್ಗಸೂಚಿ ನೀಡದ ಕಾರಣ, ಒಂದೇ ಒಂದು ಕಾಮಗಾರಿ ಆರಂಭಗೊಂಡಿಲ್ಲ.
ದುಡಿಮೆಗಾಗಿ ವಲಸೆ ಹೋಗುವುದನ್ನು ತಪ್ಪಿಸಲು ಹಾಗೂ ಸ್ಥಳೀಯವಾಗಿಯೇ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಜಾರಿಗೆ ಬಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ವಿಬಿ ಜಿ ರಾಮ್ ಜಿ ಎಂದು ನಾಮಕರಣ ಮಾಡಿದ್ದ ಕೇಂದ್ರ ಸರ್ಕಾರ ಕಳೆದ ಡಿಸೆಂಬರ್‌ನಲ್ಲಿಯೇ ಇದನ್ನು ಅನುಷ್ಠಾನಗೊಳಿಸಿದೆ. ಆದರೆ, ಅದಕ್ಕೆ ಪೂರಕವಾಗಿ ನಿಯಮ ಮತ್ತು ಮಾರ್ಗಸೂಚಿ ರಚಿಸದೇ ಇರುವುದರಿಂದ ಯೋಜನೆ ಅನುಷ್ಠಾನಕ್ಕೆ ಸಮಸ್ಯೆ ಎದುರಾಗಿದೆ. 2026 ನೂತನ ವರ್ಷ ಆರಂಭಗೊಂಡು ಮೂರೂವರೆ ತಿಂಗಳುಗಳಾದರೂ ಈವರೆಗೆ ಒಂದೇ ಒಂದು ಕಾಮಗಾರಿ ಶುರುವಾಗಿಲ್ಲ.
ಅನುಮೋದನೆ ಇಲ್ಲ: ಏಪ್ರಿಲ್ 1ರಂದು ಆರಂಭವಾಗಿರುವ ನೂತನ ಹಣಕಾಸು ವರ್ಷದಲ್ಲಿ ವಿಬಿ ಜಿ ರಾಮ್ ಜಿ (ಹಳೆಯ ಮನರೇಗಾ) ಯೋಜನೆಗೆ ಸಂಬಂಧಿಸಿದ ಕಾರ್ಯಯೋಜನೆಗೆ ಅನುಮೋದನೆ ಸಿಕ್ಕಿಲ್ಲ. ನರೇಗಾ ಕಾಮಗಾರಿಗೆ ಸಂಬAಧಿಸಿದಂತೆ ಎಲ್ಲ ಗ್ರಾಮ ಪಂಚಾಯಿತಿಗಳಿಂದಲೂ ಕಾರ್ಯಯೋಜನೆ ತಯಾರಾಗಿ ಸಲ್ಲಿಕೆಯಾಗಿದೆ. ಆದರೆ, ಅದಕ್ಕೆ ಯುಕ್ತಧಾರ ಜಿಯೋಸ್ಪೇಷಿಯಲ್ ಪ್ಲಾನಿಂಗ್ ಪೋರ್ಟಲ್‌ನಲ್ಲಿ (ಎನ್‌ಆರ್‌ಎಸ್‌ಸಿ) ಅನುಮೋದನೆ ಸಿಕ್ಕಿಲ್ಲ. ಹಾಗಾಗಿ, ಹೊಸದಾಗಿ ಯಾವುದೇ ಕಾಮಗಾರಿ ಆರಂಭಕ್ಕೆ ಅವಕಾಶ ಇಲ್ಲದಂತಾಗಿದೆ.
ಸದ್ಯ ಕಳೆದ ಹಣಕಾಸು ವರ್ಷದ ಅವಧಿಯಲ್ಲಿ ಆರಂಭಿಸಿ ಅಪೂರ್ಣವಾಗಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಜಿಲ್ಲೆಯ 127 ಗ್ರಾಮ ಪಂಚಾಯಿತಿಗಳಿಗೆ ಜಿಪಂ ಸಿಇಒ ನಿದೇರ್ಶನ ನೀಡಿದ್ದಾರೆ. ಅದನ್ನು ಬಿಟ್ಟರೆ, 2026-27ನೇ ಸಾಲಿನಲ್ಲಿ ಯಾವುದೇ ಕಾಮಗಾರಿ ಕುರಿತು ಸೂಚನೆ ಬಂದಿಲ್ಲ.



ಕಾಮಗಾರಿ ಪೂರ್ಣಗೊಳಿಸಲು ಸೂಚನೆ

ನರೇಗಾದಡಿ ಅನುಷ್ಠಾನಗೊಳಿಸಿ ಚಾಲ್ತಿಯಲ್ಲಿರುವ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ಸೂಚನೆ ನೀಡಿದೆ. ಹಲವು ಕಾಮಗಾರಿಗಳು ಅಪೂರ್ಣವಾಗಿರುವುದರಿಂದ ನರೇಗಾ ತಂತ್ರಾಂಶದಲ್ಲಿ ಪೂರ್ಣವಾಗಿರುವ ಕುರಿತು ನಮೂದಿಸಿಲ್ಲ. ಅಂತಹ ಕಾಮಗಾರಿಗಳನ್ನು ಪರಿಶೀಲಿಸಿ ಭೌತಿಕವಾಗಿ ಮತ್ತು ಆರ್ಥಿಕ ಪ್ರಕ್ರಿಯಾತ್ಮಕ ಕ್ರಮ ಪೂರ್ಣಗೊಳಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಅದಕ್ಕೆ ಸಂಬಂಧಿಸಿದ ಬಿಲ್‌ಗಳ ಬಿಡುಗಡೆಗೆ ಮಾತ್ರ ಅವಕಾಶ ಕಲ್ಪಿಸಿದೆ.

ವಲಸೆ ಕಡಿಮೆ

ಬೆಂಗಳೂರು ದಕ್ಷಿಣ(ರಾಮನಗರ) ಜಿಲ್ಲೆಯಲ್ಲಿ ಒಟ್ಟಾರೆ 127 ಗ್ರಾಪಂಗಳಿದ್ದು, 1.95 ಲಕ್ಷ ಜಾಬ್ ಕಾರ್ಡ್ಗಳಡಿಯಲ್ಲಿ 4.02 ಲಕ್ಷ ಕೂಲಿ ಕಾರ್ಮಿಕರು ನೋಂದಾಯಿಸಿಕೊಂಡಿದ್ದರು. ಇದರಲ್ಲಿ 1.04 ಲಕ್ಷ ಜಾಬ್ ಕಾರ್ಡ್ಗಳು ಮತ್ತು 1.73 ಲಕ್ಷ ಸಕ್ರಿಯ ಕಾರ್ಮಿಕರು ಇದ್ದಾರೆ. ಜಿಲ್ಲೆಯ ಚಿತ್ರಣವೇ ಬೇರೆ ಇರುವುದು, ಬಹುತೇಕ ಮಂದಿ ಕೃಷಿ, ತೋಟಗಾರಿಕೆ, ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಕಾರಣ ಕೂಲಿಗಾಗಿ ವಸಲೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿಲ್ಲ ಎನ್ನುವುದು ಅಧಿಕಾರಿಗಳ ಅಭಿಪ್ರಾಯವಾಗಿದೆ.

ವಿಬಿ ಜಿ ರಾಮ್ ಜಿ ಯೋಜನೆ ಜಾರಿಗೆ ಬಂದ ನಂತರ, ಈ ಸಾಲಿನಲ್ಲಿ ಹೊಸ ಕಾಮಗಾರಿಗಳನ್ನು ಕೈಗೊಳ್ಳಲು ಅನುಮೋದನೆ ಸಿಕ್ಕಿಲ್ಲ. ಹಿಂದಿನ ಸಾಲಿನ ಕಾಮಗಾರಿಗಳನ್ನೇ ಪೂರ್ಣಗೊಳಿಸುವಂತೆ ಜಿಪಂ ಸಿಇಒ ಅವರಿಂದ ನಿರ್ದೇಶನ ಬಂದಿದೆ. ಅದನ್ನಷ್ಟೇ ಮಾಡುತ್ತಿz್ದÉÃವೆ.
| ಹೆಸರು ಹೇಳಲು ಇಚ್ಛಿಸದ ಪಿಡಿಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net