ಬಿಡದಿಯಲ್ಲಿ ಅನಧಿಕೃತ ಬಡಾವಣೆಗಳು?

ಪಾರ್ಕ್​ ಜಾಗದಲ್ಲಿ ಅಕ್ರಮವಾಗಿ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ನಿವೇಶನದ ಮಾಲೀಕರುಗುಂಡಿ ಅಗೆಸಿರುವುದು.
ಪಾರ್ಕ್​ ಜಾಗದಲ್ಲಿ ಅಕ್ರಮವಾಗಿ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ನಿವೇಶನದ ಮಾಲೀಕರುಗುಂಡಿ ಅಗೆಸಿರುವುದು.
Published on
ಬಿಡದಿ: ಎಐ ಸಿಟಿ ಯೋಜನೆ ಮುನ್ನೆಲೆಗೆ ಬಂದಂತೆ ದಿನದಿಂದ ದಿನಕ್ಕೆ ಈ ಭಾಗದ ಭೂಮಿ ಬೆಲೆ ಗಗನಕ್ಕೆ ಏರುತ್ತಿದೆ. ಜತೆಜತೆಗೆ ಅಕ್ರಮಗಳೂ ಹೆಚ್ಚಾಗುತ್ತಿವೆ. ಲೇಔಟ್​ನಲ್ಲಿ ಉದ್ಯಾನಕ್ಕೆ ಬಿಟ್ಟಿದ್ದ ಜಾಗವನ್ನೇ ಕೆಲ ರಿಯಲ್​ ಎಸ್ಟೇಟ್​ ಮಾಫಿಯಾದವರು ಅತಿಕ್ರಮಣ ಮಾಡುವ ಹುನ್ನಾರ ನಡೆಸುತ್ತಿದ್ದಾರೆ. ಈ ಅಕ್ರಮಕ್ಕೆ ಸರ್ಕಾರಿ ಅಧಿಕಾರಿಗಳೇ ಕೈ ಜೋಡಿಸಿರುವ ಬಗ್ಗೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ.
ಹೌದು... ಬಿಡದಿ ಪಟ್ಟಣ ಬೆಂಗಳೂರಿಗೆ ಹತ್ತಿರ ಇರುವ ಕಾರಣ ಇಲ್ಲಿನ ಭೂಮಿಗೆ ಎಲ್ಲೆಲ್ಲಿದ ಬೆಲೆ ಇದೆ. ಬಿಡದಿ ಪುರಸಭೆ ವ್ಯಾಪ್ತಿಯ 8ನೇ ವಾರ್ಡ್​ನ ಖಾಸಗಿ ಬಡಾವಣೆಯೊಂದರಲ್ಲಿಉದ್ಯಾನವನಕ್ಕೆ ಮೀಸಲಿಟ್ಟಿದ್ದ ಜಾಗವನ್ನು ಇನ್ನೊಂದು ಖಾಸಗಿ ಲೇಔಟ್​ನವರು ಒತ್ತುವರಿ ಮಾಡಿಕೊಂಡು ರಸ್ತೆ ನಿರ್ಮಿಸುತ್ತಿರುವ ಆರೋಪ ಇದ್ದು, ಇದರ ವಿರುದ್ಧ ಸಾಮಾಜಿಕ ಹೋರಾಟಗಾರರು ಕಾನೂನಿನ ಮೊರೆ ಹೋಗಿದ್ದಾರೆ.
ಉದ್ಯಾನವನದ ಜಾಗದಲ್ಲಿ ರಸ್ತೆ
ಪುರಸಭೆ 8ನೇ ವಾರ್ಡ್​ನ ಬಡಾವಣೆ ಒಂದರಲ್ಲಿ 3 ಎಕರೆ 14 ಗುಂಟೆ ವಿಸ್ತೀರ್ಣದಲ್ಲಿ 1,798 ಅಡಿ ಜಾಗವನ್ನು ಉದ್ಯಾನವನಕ್ಕೆಂದು ಬಿಡಲಾಗಿದೆ. ಆದರೆ ಪಕ್ಕದ ಲೇಔಟ್​ನ ಎರಡು ನಿವೇಶನಗಳಿಗೆ ರಸ್ತೆ ಇಲ್ಲದ ಕಾರಣ ಈ ಪಾರ್ಕ್​ ಜಾಗದಲ್ಲಿ ಅಕ್ರಮವಾಗಿ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ನಿವೇಶನದ ಮಾಲೀಕರುಗುಂಡಿ ಅಗೆಸಿದ್ದಾರೆ ಎನ್ನಲಾಗಿದೆ.
ನಾಮ್​ ಕೇ ವಾಸ್ತೆಗಷ್ಟೆ ರಸ್ತೆ
ಸರ್ವೇ ನಂ.22/4ರಲ್ಲಿನ 1 ಎಕರೆ 15 ಗುಂಟೆ ವಿಸ್ತೀರ್ಣದ ಖಾಸಗಿ ಲೇಔಟ್​ನಲ್ಲಿ 42 ನಿವೇಶನಗಳಿವೆ. ಈ ನಿವೇಶನಗಳ ಅಳತೆಗೂ ಆಕಾರ್​ ಬಂದ್​ನಲ್ಲಿ ನಮೂದಿತ ಅಳತೆಗೂ ಹೊಂದಾಣಿ ಇಲ್ಲ. ನಿವೇಶನ ಸಂಖ್ಯೆ 15ರಿಂದ 21ರವರೆಗಿನ ನಿವೇಶನಗಳಿಗೆ ಪ್ರಸ್ತುತ ಯಾವುದೇ ರಸ್ತೆಯೂ ಇಲ್ಲ. ಬಡಾವಣೆ ನೆಯಲ್ಲಿ ನಾಮ್​ ಕೇ ವಾಸ್ತೆಗೆ ರಸ್ತೆ ತೋರಿಸಿದ್ದಾರೆ. ಈ ನಿವೇಶನಗಳಿಗೆ ತೆರಳಲು ರಸ್ತೆಗಾಗಿ ಪಾರ್ಕ್​ ಜಾಗವನ್ನು ಒತ್ತುವರಿಮಾಡಿಕೊಳ್ಳಲಾಗುತ್ತಿದೆ ಎನ್ನಲಾಗಿದೆ.
ಖಾತೆ ಮಾಡಿದ ಅಧಿಕಾರಿಗಳು
ಯಾವುದೇ ಲೇಔಟ್​ನಲ್ಲಿ ನಿವೇಶನಗಳಿಗೆ ರಸ್ತೆ ಸೇರಿದಂತೆ ಅಗತ್ಯ ಸೌಕರ್ಯ ಕಲ್ಪಿಸಿದ ನಂತರವಷ್ಟೇ ಅಧಿಕಾರಿಗಳು ನಿವೇಶನಗಳ ಖಾತೆ ಮಾಡಿಕೊಡಬೇಕು. ಆದರೆ, ಸರ್ವೇ ನಂ.22/4ರಲ್ಲಿನ ಖಾಸಗಿ ಲೇಔಟ್​ನ 19 ಹಾಗೂ 20ನೇ ನಿವೇಶನಗಳಿಗೆ ನಕಾಶೆಯಲ್ಲಿ ಮಾತ್ರ ರಸ್ತೆ ತೋರಿಸಲಾಗಿದ್ದು, ಸ್ಥಳಕ್ಕೆ ಹೋಗಿ ಪರಿಶೀಲಿಸಿದರೆ ರಸ್ತೆಯೇ ಇಲ್ಲ. ಪುರಸಭೆಅಧಿಕಾರಿಗಳು ಖುದ್ದಾಗಿ ಸ್ಥಳ ಪರಿಶೀಲಿಸದೆ ಕಚೇರಿಯಲ್ಲಿ ಕುಳಿತೇ ಈ ನಿವೇಶನಗಳಿಗೆ ಇ&ಖಾತೆ ಮಾಡಿಕೊಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಲೋಕಾಯುಕ್ತಕ್ಕೆ ದೂರು
ಖಾಸಗಿ ಲೇಔಟ್​ನಲ್ಲಿನ ಕೆಲ ನಿವೇಶನಗಳಿಗೆ ನೆಯಲ್ಲಿ ಮಾತ್ರ ರಸ್ತೆ ತೋರಿಸಿದ್ದಾರೆ. ಸ್ಥಳಕ್ಕೆ ಹೋಗಿ ನೋಡಿದರೆ ರಸ್ತೆಯೇ ಇಲ್ಲ. ಪುರಸಭೆ ಅಧಿಕಾರಿಗಳು ಕಾನೂನು ಬಾಹಿರವಾಗಿ ಇ&ಖಾತೆ ಮಾಡಿದ್ದಾರೆ ಎಂದು ಪುರಸಭೆ ಮುಖ್ಯಾಧಿಕಾರಿ ಮೀನಾ ಹಾಗೂ ಆರ್​ಒ ನಂಜುಂಡಸ್ವಾಮಿ ವಿರುದ್ಧ ರಾಮನಗರ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಕೂಡಲೇ ಈ ಎರಡೂ ನಿವೇಶನಗಳ ಖಾತೆ ರದ್ದುಗೊಳಿಸಿ, ಪಾರ್ಕ್​ ಜಾಗಕ್ಕೆ ಕಾಂಪೌಂಡ್​ ನಿರ್ಮಿಸಲು ಪುರಸಭೆಗೆ ನಿರ್ದೇಶನ ನೀಡಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.
ಪಾರ್ಕ್​ ಜಾಗದಲ್ಲಿನ ಕಾಮಗಾರಿ ಸ್ಥಗಿತ
ಉದ್ಯಾನವನದ ಜಾಗದಲ್ಲಿ ರಸ್ತೆ ನಿರ್ಮಾಣ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳಿಗೂ ದೂರು ಸಲ್ಲಿಕೆಯಾಗಿದ್ದು, ದೂರಿನ ಹಿನ್ನೆಲೆಯಲ್ಲಿ ಕ್ರಮಕ್ಕೆ ಪುರಸಭೆ ಅಧಿಕಾರಿಗಳಿಗೆ ಸೂಚನೆ ಬಂದಿತ್ತು. ಆಗ ಅಧಿಕಾರಿಗಳು ಪಾರ್ಕ್​ ಜಾಗದ ಚಕ್ಕು ಬಂದಿ ಗುರುತಿಸಿ ಅಳತೆ ಕಲ್ಲುಗಳನ್ನು ಅಳವಡಿಸಿ ಹೋಗಿದ್ದರು. ಆದರೂ ಖಾಸಗಿ ಲೇಔಟ್​ನ ಕೆಲ ನಿವೇಶನಗಳ ಮಾಲೀಕರು ಈ ಕಲ್ಲುಗಳನ್ನು ಕಿತ್ತಿ, ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದರು. ಈ ಬಗ್ಗೆಯೂ ದೂರು ಸಲ್ಲಿಕೆಯಾದ ಕಾರಣ ರಸ್ತೆ ನಿರ್ಮಿಸುತ್ತಿರುವವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಪುರಸಭೆಗೆ ನಿರ್ದೇಶನ ನೀಡಿದ್ದಾರೆ ಎನ್ನಲಾಗಿದ್ದು, ಡಿಸಿ ಆದೇಶದಂತೆ ಪುರಸಭೆ ಇಂಜಿನಿಯರ್​ಗಳು ಸ್ಥಳಕ್ಕೆ ಪರಿಶೀಲಿಸಿ, ಕಾಮಗಾರಿ ನಿಲ್ಲಿಸಿದ್ದಾರೆ.
"

ನಮ್ಮ ಬಡಾವಣೆಯಲ್ಲಿ ಪಾರ್ಕ್​ಗೆ ಮೀಸಲಾಗಿದ್ದ ಜಾಗದಲ್ಲಿ ಪಕ್ಕದ ಲೇಔಟ್​ನ ಕೆಲವರು ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಪುರಸಭೆ ಅಧಿಕಾರಿಗಳು ಸಹ ರಸ್ತೆ ಇಲ್ಲದಿದ್ದರೂ ಇ&ಖಾತೆ ಮಾಡಿಕೊಟ್ಟಿದ್ದಾರೆ. ಈ ಬಗ್ಗೆ ಲೋಕಾಯುಕ್ತ, ಜಿಲ್ಲಾಧಿಕಾರಿಗಳಿಗೆ ದಾಖಲೆ ಸಮೇತ ದೂರು ಸಲ್ಲಿಸಲಾಗಿದೆ. ಇನ್ನಾದರೂ ಅಧಿಕಾರಿಗಳು ಉದ್ಯಾನವನದ ಸ್ಥಳದಲ್ಲಿ ಕೂಡಲೇ ನಾಮಫಲಕ ಅಳವಡಿಸಿ, ಪಾರ್ಕ್​ ಅಭಿವೃದ್ಧಿ ಪಡಿಸಬೇಕಿದೆ.

— > ಆರ್​.ಎಚ್​.ರಾಜಶೇಖರ ಪಾರ್ಕ್​ ಜಾಗ ಇರುವ ಬಡಾವಣೆಯ ೇಮಾಭಿವೃದ್ಧಿ ಸಂದ ಅಧ್ಯ
"

ಬಿಡದಿ ಪಟ್ಟಣದಲ್ಲಿ ಕೆಲ ಅನಧಿಕೃತ ಬಡಾವಣೆಗಳಿವೆ ಎಂಬ ಆರೋಪ ಇದೆ. ಪಾರ್ಕ್​ ಜಾಗವನ್ನು ಗುರುತಿಸಿ ಸರ್ವೇ ಅಧಿಕಾರಿಗಳು ಅಧಿಕೃತವಾಗಿ ನಮಗೆ ವರದಿ ನೀಡಿಲ್ಲ. ಬಡಾವಣೆ ನಿವಾಸಿಗಳು ಹೇಳುವಂತೆ ಪಾರ್ಕ್​ ಜಾಗ ಅಭಿವೃದ್ಧಿ ಕಂಡಿಲ್ಲ. ಹಾಗಾಗಿ ಬಡಾವಣೆಗಳ ಜಾಗದ ಸರ್ವೇಗೆ ಸರ್ವೇ ಇಲಾಖೆಗೆ ಪತ್ರ ಬರೆಯಲಾಗುವುದು. ಸರ್ವೇ ಬಳಿಕ ಸಮಸ್ಯೆ ಬಗೆಹರಿಯುತ್ತದೆ.

— > ಮೀನಾ ಪುರಸಭೆ ಮುಖ್ಯಾಧಿಕಾರಿ, ಬಿಡದಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net