ವಿಭೂತಿಕೆರೆ, ಅಂಕನಹಳ್ಳಿ, ಚನ್ನಮಾನಹಳ್ಳಿ ಸೇರಿ ಒಟ್ಟು ಏಳು ಮಂದಿ ಸ್ನೇಹಿತರು ಕಾರಿನಲ್ಲಿ ಧರ್ಮಸ್ಥಳ ಸೇರಿ ಇತರ ೇತ್ರಗಳ ಪ್ರವಾಸ ಕೈಗೊಂಡಿದ್ದರು. ಪ್ರವಾಸ ಮುಗಿಸಿ ಮೈಸೂರು ಮಾರ್ಗವಾಗಿ ಶನಿವಾರ ತಡರಾತ್ರಿ ಮರಳಿ ಬರುತ್ತಿದ್ದಾಗ ಕೆ.ಆರ್.ನಗರದ ಸಮೀಪ ಅಪಘಾತವಾಗಿದೆ. ಅಪಘಾತದಲ್ಲಿ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಳಿದ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಎಲ್ಲರೂ 19ರಿಂದ 20 ವರ್ಷದವಾರಾಗಿದ್ದಾರೆ.