ಸೋಲೂರು ಹೋಬಳಿಯ ಕೆಂಪೋಹಳ್ಳಿಯ ಪ್ರಜ್ವಲ್ ಗೌಡ (29) ಹಾಗೂ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕು ಇಟಗಿಕೋಟೆಯ ಕೊಟ್ರೇಶ್ (28) ಮೃತರು. ಪ್ರಜ್ವಲ್ಗೌಡ ಹಾಗೂ ಕೊಟ್ರೇಶ್ ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿಗಳಾಗಿದ್ದು, ಕೆಂಪೋಹಳ್ಳಿಯಲ್ಲಿ ನಿರ್ಮಾಣಗೊಳ್ಳುತ್ತಿದ್ದ ಮನೆ ನೋಡಲು ಸ್ನೇಹಿತ ಕೊಟ್ರೇಶ್ನನ್ನು ಪ್ರಜ್ವಲ್ ಕರೆದುಕೊಂಡು ಬಂದಿದ್ದ. ಬುಧವಾರ ಬೆಳಗ್ಗೆ ಬೈಕ್ನಲ್ಲಿ ಬೆಂಗಳೂರಿಗೆ ವಾಪಸ್ ಹೋಗುತ್ತಿದ್ದ ವೇಳೆ ಕುಣಿಗಲ್ ಕಡೆಯಿಂದ ಬಂದ ಕಾರು ಬೈಕ್ನ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿದ್ದ ಇಬ್ಬರನ್ನೂ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ.