ಚಿಕಿತ್ಸೆ ಲಿಸದೆ ಕಾರ್ಮಿಕರಿಬ್ಬರು ಸಾವು

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮಾಗಡಿ: ಪಟ್ಟಣದ ಸೋಮೇಶ್ವರ ದೇವಾಲಯ ಬಳಿಯ ಖಾಸಗಿ ವುಡ್​ ಇಂಡಸ್ಟ್ರೀಸ್​ ಘಟಕದ ಪ್ರ್ರೊಡಕ್ಷನ್​ ಸೆಕ್ಷನ್​ನ ಸಾ&ಡಸ್ಟ್​ ಸ್ಫೋಟಗೊಂಡು ಗಾಯಗೊಂಡಿದ್ದ ಇಬ್ಬರು ಕಾರ್ಮಿಕರು ಚಿಕಿತ್ಸೆ ಲಿಸದೆ ಮೃತಪಟ್ಟಿದ್ದಾರೆ.
ಅಸ್ಸಾಂ ಮೂಲದ ಕುಲಮಣಿ ಮಲ್ಲಿಕ್​ (47) ಹಾಗೂ ಕೈಲಾಸ್​ ಮಲ್ಲಿಕ್​(45) ಮೃತರು. ಮೇ 6ರಂದು ಸಂಭವಿಸಿದ ಬೆಂಕಿ ದುರಂತದಲ್ಲಿ ತೀವ್ರ ಗಾಯಗೊಂಡಿದ್ದ ಇಬ್ಬರು ಕಾರ್ಮಿಕರಿಗೆ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ತೀವ್ರಸುಟ್ಟ ಗಾಯಗಳಾಗಿದ್ದ ಕುಲಮಣಿ ಮಲ್ಲಿಕ್​ ಆಸ್ಪತ್ರೆಗೆ ದಾಖಲಾದ ಎರಡು ದಿನದ ಬಳಿಕ ಮೃತಪಟ್ಟಿದ್ದರೆ, ಕೈಲಾಸ್​ ಮಲ್ಲಿಕ್​ ಸೋಮವಾರ ಬೆಳಗ್ಗೆ ಮೃತಪಟ್ಟಿದ್ದಾನೆ. ಇಬ್ಬರ ಮೃತದೇಹಗಳನ್ನು ವಿಮಾನದಲ್ಲಿ ಅಸ್ಸಾಂನ ಕೇಂದ್ರಪಡ ಗ್ರಾಮಕ್ಕೆ ರವಾನಿಸಲಾಗಿದೆ. ಮೃತ ಕಾರ್ಮಿಕರ ಸಂಬಂಧಿಕರು ನೀಡಿದ ದೂರಿನ ಮೇರೆಗೆ ಮಾಗಡಿ ಪೊಲೀಸರು ಇಂಡಸ್ಟ್ರೀಸ್​ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net