

ಬಿಡದಿ:
ಅವರಗೆರೆ ಬ್ರಿಡ್ಜ್ ಬಳಿಯ ಬೆಂಗಳೂರು&ಮೈಸೂರು ಎಕ್ಸ್ಪ್ರೆಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಳವಡಿಸಿದ್ದ ವೇಗದ ಮಿತಿ ಮಾಹಿತಿ ಕೊಡುವ ಕಬ್ಬಿಣದ ಬೋರ್ಡ್ಗೆ ಶನಿವಾರ ಕೇರಳಂ ಸಾರಿಗೆ ಬಸ್ ಡಿಕ್ಕಿಯಾಗಿ ಪಲ್ಟಿಯಾಗಿದ್ದು ಇಬ್ಬರು ಮೃತಪಟ್ಟಿದ್ದರೆ, 25ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿವೆೆ.
ಕೇರಳಂನಿಂದ ಬೆಂಗಳೂರು ಕಡೆಗೆ ಬಸ್ ಬರುತ್ತಿತ್ತು. ಚಾಲಕನ ಅಜಾಗರೂಕತೆಯಿಂದ ಅಪಘಾತ ನಡೆದಿದೆ ಎನ್ನಲಾಗಿದೆ. ಮುಂಜಾನೆಯಾದ ಕಾರಣ ಬಸ್ ಚಾಲಕ ಮಂಪರು ನಿದ್ದೆಗೆ ಜಾರಿದ್ದು ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ.
ಸಂಚಾರಕ್ಕೆ ಅಡ್ಡಿ