ಚನ್ನಪಟ್ಟಣದಲ್ಲಿ ಇಬ್ಬರು ಸರಗಳ್ಳರ ಸೆರೆ

ಚನ್ನಪಟ್ಟಣ ವ್ಯಾಪ್ತಿಯಲ್ಲಿ ಸರಕಳವು ಪ್ರಕರಣದ ಆರೋಪಿಗಳಿಂದ ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡ ಚಿನ್ನಾಭರಣ, ದ್ವಿಚಕ್ರವಾಹನ. ಸಿಪಿಐ ಬಿ.ಕೆ.ಪ್ರಕಾಶ್​ ಹಾಗೂ ಪಿಎಸ್​ಐ ಮನೋಹರ್​, ಸಿಬ್ಬಂದಿ ಇದ್ದರು.
ಚನ್ನಪಟ್ಟಣ ವ್ಯಾಪ್ತಿಯಲ್ಲಿ ಸರಕಳವು ಪ್ರಕರಣದ ಆರೋಪಿಗಳಿಂದ ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡ ಚಿನ್ನಾಭರಣ, ದ್ವಿಚಕ್ರವಾಹನ. ಸಿಪಿಐ ಬಿ.ಕೆ.ಪ್ರಕಾಶ್​ ಹಾಗೂ ಪಿಎಸ್​ಐ ಮನೋಹರ್​, ಸಿಬ್ಬಂದಿ ಇದ್ದರು.
Published on
ಚನ್ನಪಟ್ಟಣ: ಇಬ್ಬರು ಸರಗಳ್ಳರನ್ನು ಬಂಧಿಸುವಲ್ಲಿ ಇಲ್ಲಿನ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.
ತಾಲೂಕಿನ ಕೋಲೂರು ಗ್ರಾಮದ ಕೆ.ಎಂ. ಕಾರ್ತಿಕ್​ (29), ರಾಮನಗರದ ರಾಯರದೊಡ್ಡಿ ನಿವಾಸಿ ಡಿ. ಆರ್​. ಸಚಿನ್​ ಬಂಧಿತರು.
ಕಳೆದ ಜ 24 ರಂದು ಗ್ರಾಮಾಂತರ ಠಾಣಾ ವ್ಯಾಪ್ತಿಯ ಕೆಂಗಲ್​ ದೇವಸ್ಥಾನ ಸಮೀಪ ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದ ಮಹಿಳೆಯೊಬ್ಬರ ಚಿನ್ನದ ಸರವನ್ನು ಕಸಿದುಕೊಂಡು ಇಬ್ಬರು ಅಪರಿಚಿತರು ಪರಾರಿಯಾಗಿದ್ದರು. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ಬಲೆಬೀಸಿದ ಗ್ರಾಮಾಂತರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರು ಈ ಹಿಂದೆಯೂ ಹಲವು ಸರಗಳ್ಳತನ ನಡೆಸಿದ್ದಾರೆ ಎಂಬುದು ತನಿಖೆಯಲ್ಲಿ ಹೊರಬಂದಿದೆ. ಚನ್ನಪಟ್ಟಣ ಗ್ರಾಮಾಂತರ ಠಾಣೆ, ಮದ್ದೂರು ಠಾಣೆ ಹಾಗೂ ಐಜೂರು ಠಾಣೆಯ ಸರಹದ್ದಿನಲ್ಲಿ ಸರಕಳವು ಮಾಡಿದ್ದು, ಇವರಿಂದ ಸುಮಾರು 16,8 ಲ ರೂಪಾಯಿ ಮೌಲ್ಯದ 120 ಗ್ರಾಂ ಚಿನ್ನಾಭರಣವನ್ನು ಹಾಗೂ ಕೃತ್ಯಕ್ಕೆ ಬಳಸಿದ ದ್ವಿಚಕ್ರವಾಹನವನ್ನು ವಶಕ್ಕೆ ಪಡೆಯಲಾಗಿದೆ.
ಸರಗಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಗ್ರಾಮಾಂತರ ಸಿಪಿಐ ಬಿ.ಕೆ.ಪ್ರಕಾಶ್​ ಹಾಗೂ ಪಿಎಸ್​ಐ ಮನೋಹರ್​ ನೇತೃತ್ವದ ಸಿಬ್ಬಂದಿ ಶಿವಕುಮಾರ್​, ಹನುಮಂತಶೆಟ್ಟಿ, ಚೇತನ್​, ಪವನ್​ ಕುಮಾರ್​, ಶಿವು, ನಂದೀಶ್​, ಜಿಲ್ಲಾ ಪೊಲೀಸ್​ ಕಚೇರಿ ತಾಂತ್ರಿಕ ವಿಭಾಗದ ಮಹದೇವ್​ ಮತ್ತು ವಾಹನ ಚಾಲಕ ಪ್ರಕಾಶ್​ ಮತ್ತು ಮಹೇಶ್​ ಅವರನ್ನು ಎಸ್ಪಿ ಶ್ರೀನಿವಾಸಗೌಡ ಹಾಗೂ ಡಿವೈಎಸ್ಪಿ ಕೆ.ಸಿ.ಗಿರಿ ಅಭಿನಂದಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net