ಗಾಂಜಾ ಮಾರುತ್ತಿದ್ದ ಇಬ್ಬರ ಬಂಧನ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಬಿಡದಿ: ಕಮರ್ಷಿಯಲ್​ ಕಾಂಪ್ಲೆಕ್ಸ್​ ಕೊಠಡಿಯಲ್ಲಿ ಗಾಂಜಾ ಮಾರುತ್ತಿದ್ದ ಇಬ್ಬರನ್ನು ಬಿಡದಿ ಪೊಲೀಸರು ಬಂಧಿಸಿದ್ದಾರೆ.
ಬಿಹಾರ ಮೂಲದ ಮಿಥುನ್​ ಕುಮಾರ್​ ಯಾದವ್​(23), ಸಚ್ಚಿನ್​ ಯಾದವ್​ (19) ಬಂಧಿತರು. ಶ್ಯಾನಮಂಗಲ ಗ್ರಾಮದ ಅನಿಲ್​ ಕುಮಾರ್​ ಎಂಬುವವರ ಮಾಲೀಕತ್ವದ ಕಟ್ಟಡದಲ್ಲಿ ಸಾರ್ವಜನಿಕರಿಗೆ ಗಾಂಜಾ ಮಾರುತ್ತಿರುವ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ದಾಳಿ ಮಾಡಿದ ಪೊಲೀಸರು ಬಂಧಿತರ ಬಳಿ ಇದ್ದ ಎರಡು ಬ್ಯಾಗ್​ಗಳ ಪೈಕಿ ಒಂದರಲ್ಲಿ 1,860ಗ್ರಾಂ ಮತ್ತೊಂದು ಬ್ಯಾಗ್​ನಲ್ಲಿ 1,360 ಗ್ರಾಂ ಸೇರಿದಂತೆ ಒಟ್ಟು 3.10ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ. ಬಿಡದಿ ಪೊಲೀಸ್​ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net