ಮೇಕೆದಾಟು, ಸಂಗಮಕ್ಕೆ ಪ್ರವಾಸಿಗರಿಗೆ ರ್ನಿಬಂಧ

ಸಂಗಮ
ಸಂಗಮ
Published on
ಕನಕಪುರ: ತಾಲೂಕಿನ ಪ್ರಸಿದ್ಧ ಪ್ರವಾಸಿ ಸ್ಥಳ ಸಂಗಮ ಹಾಗೂ ಮೇಕೆದಾಟು ತಾಣಗಳಲ್ಲಿ ಪ್ರವಾಸಿಗರಿಗೆ ಮೇ 2ರವರೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ ಎಂದು ಸಂಗಮ ವಲಯ ವನ್ಯಜಿವಿ ವಿಭಾಗದ ವಲಯ ಅರಣ್ಯಾಧಿಕಾರಿ ಅನಿಲ್​ ಕುಮಾರ್​ ತಿಳಿಸಿದ್ದಾರೆ.
ಗುರುವಾರ(ಏ.23) ಸಂಗಮ ಕಾವೇರಿ ನದಿ ತೀರದಲ್ಲಿ ನೀರು ಕುಡಿಯಲು ಬಂದ ಕಾಡಾನೆಯೊಂದು ಪ್ರವಾಸಿಗರತ್ತ ನುಗ್ಗಿ ಬಂದು ಆತಂಕ ಸೃಷ್ಟಿಸಿತ್ತು. ಏ.26 ಭಾನುವಾರ 27 ಸೋಮವಾರ ಪ್ರವಾಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ರ್ನಿಬಂಧಿಸಲಾಗಿತ್ತು. ಆದರೆ, ಒಂಟಿ ಕಾಡಾನೆ ಮತ್ತೆ ಸಂಗಮ ಹಾಗೂ ಮೇಕೆದಾಟು ಬಳಿ ಸುಳಿದಾಡುತ್ತಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಮೇ 2ರ ಭಾನುವಾರದವರೆಗೆ ಪ್ರವಾಸಿಗರ ಭೇಟಿಗೆ ಅವಕಾಶ ಇಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net