ಸಿದ್ದರಾಜುಗೆ ಸಿದ್ಧಿಸಿದ ಟೊಮ್ಯಾಟೊ ಕೃಷಿ

ಟೊಮ್ಯಾಟೊ ಬೆಳೆ ಜತೆ ರೈತ ಸಿದ್ದರಾಜು.
ಟೊಮ್ಯಾಟೊ ಬೆಳೆ ಜತೆ ರೈತ ಸಿದ್ದರಾಜು.
Published on

10 ವರ್ಷಗಳಿಂದ ಕೈ ಹಿಡಿದ ಬೆಳೆ > ಹೊಲದಲ್ಲೇ ಗ್ರೇಡಿಂಗ್​ ಮಾಡಿ ಮಾರಾಟ

ಕುದೂರು: ಬೆಲೆ ಏರಿಳಿತಕ್ಕೆ ಸಿಲುಕುವ ಟೊಮ್ಯಾಟೊ ಹಲವರ ಬದುಕು ಹಸನುಗೊಳಿಸಿದರೆ, ಕೆಲವರನ್ನು ನಷ್ಟಕ್ಕೆ ದೂಡಿದೆ ಎನ್ನುವ ಅಪವಾದವಿದೆ. ಆದರೆ ಮಾಗಡಿ ತಾಲೂಕಿನ ಮಾಚೋಹಳ್ಳಿ ರೈತನೊಬ್ಬ ದಶಕದಿಂದ ಟೊಮ್ಯಾಟೊ ಬೆಳೆದೇ ಹೆಚ್ಚಿನ ಲಾಭ ಕಂಡುಕೊಳ್ಳುತ್ತಿದ್ದಾರೆ.
ಕುದೂರು ಸಮೀಪದ ಬೆಂಗಳೂರು&ಮಂಗಳೂರು ರಾಷ್ಟೀಯ ಹೆದ್ದಾರಿ&75ರ ಬಳಿಯ ಮಾಚೋಹಳ್ಳಿ ರೈತ ಸಿದ್ದರಾಜು ಅವರು 2.8 ಎಕರೆ ಜಮೀನಿನಲ್ಲಿ ಗುಣಮಟ್ಟದ ಇಳುವರಿ ನೀಡುವ ಟೊಮ್ಯಾಟೊ ಬೆಳೆದು ಅಧಿಕ ಲಾಭ ಗಳಿಸುತ್ತಿದ್ದಾರೆ.
ಹೊರ ರಾಜ್ಯಕ್ಕೂ ರಫ್ತು
ಸಿದ್ದರಾಜು ಬೆಳೆದ ರೋಜಾ ಟೊಮ್ಯಾಟೊಗೆ ಸಖತ್​ ಬೇಡಿಕೆ ಇದೆ. ನೆಲಮಂಗಲ, ಕೋಲಾರ ಭಾಗದ ವ್ಯಾಪಾರಿಗಳು ಮಾಚೋಹಳ್ಳಿಗೆ ವಾಹನ ತಂದು ಖರೀದಿಸಿ ಕೊಂಡೊಯ್ಯುತ್ತಾರೆ. ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಗೆ ಇಲ್ಲಿಂದಲೇ ನೇರವಾಗಿ ರವಾನಿಸಲಾಗುತ್ತದೆ.
ಅಂತರ ಬೆಳೆ
ಜಮೀನಿನಲ್ಲಿ ಸಪೋಟ ಬೆಳೆದಿದ್ದು, ಅಂತರ ಬೆಳೆಯಾಗಿ ಟೊಮ್ಯಾಟೊ ಬೆಳೆಯುತ್ತಿದ್ದಾರೆ. ಕೀಟನಾಶಕ ಹಾಗೂ ಗೊಬ್ಬರವನ್ನು ಸಕಾಲಕ್ಕೆ ನೀಡಿ ಹೆಚ್ಚು ಇಳುವರಿ ಆಗುವಂತೆ ನೋಡಿಕೊಳ್ಳುತ್ತಿದ್ದಾರೆ. ಕೆಂಪು ಮಿಶ್ರಿತ ಭೂಮಿಯಾಗಿದ್ದು, ರೋಜಾ, ವೆಲ್ಕಮ್​ ತಳಿಯ ಸಸಿಗಳನ್ನು ನರ್ಸರಿಯಿಂದ ಪ್ರತಿ ಸಸಿಗೆ 60 ಪೈಸೆಯಂತೆ ತಂದು ನಾಟಿ ಮಾಡುತ್ತಾರೆ.
ಮರದ ಕೆಳಗೆ ಗ್ರೇಡಿಂಗ್​
ಟೊಮ್ಯಾಟೊ ಕಟಾವು ಮಾಡಿದ ಬಳಿಕ ಜಮೀನಿನಲ್ಲಿಯೇ ಇರುವ ದೊಡ್ಡ ಮರದ ಕೆಳಗೆ 8 ಸಾವಿರ ರೂ. ನೀಡಿ ಮಾಡಿಸಿಕೊಂಡಿರುವ ಗ್ರೇಡಿಂಗ್​ ಟೇಬಲ್​ ಮೇಲೆ ಟೊಮ್ಯಾಟೊ ಸುರಿದು ಗ್ರೇಡಿಂಗ್​ ಮಾಡಿ ಮಾರುಕಟ್ಟೆಗೆ ನೀಡುತ್ತಾರೆ. ಹೀಗಾಗಿ ಇವರ ತೋಟದ ಟೊಮ್ಯಾಟೊ ಖರೀದಿಸಲು ಮಾಲ್​ಗಳು ಮತ್ತು ದಲ್ಲಾಳಿಗಳು ಕರೆ ಮಾಡಿ ಬರುತ್ತಾರೆ. ಈಗ ಮಾರುಕಟ್ಟೆಯಲ್ಲಿ ಕೆಜಿಗೆ 50 ರೂ.ಗಿಂತ ಹೆಚ್ಚು ಬೆಲೆಗೆ ಟೊಮ್ಯಾಟೊ ಕೊಳ್ಳುತ್ತಿದ್ದಾರೆ. ಬೆಲೆ ಏರಿಳಿತವಾಗುತ್ತಿರುತ್ತದೆ. ಆದರೂ ನಾವು ನಿರಂತರವಾಗಿ ಅದನ್ನೇ ಬೆಳೆಯುತ್ತಿರುತ್ತೇವೆ ಎನ್ನುತ್ತಾರೆ ಸಿದ್ದರಾಜು.
"

ಒಂದು ಬಾಕ್ಸ್​ (ಕ್ರೇಟ್​) 20 ರಿಂದ 25 ಕೆ.ಜಿ ತೂಕ ತೂಗುತ್ತದೆ. 2 ರಿಂದ 3 ಬಾರಿ ಬೆಳೆ ಕೈಗೆ ಸಿಗಲಿದೆ. ಈ ವರ್ಷ 2 ರಿಂದ 3 ಲ ರೂ. ಆದಾಯ ನಿರೀೆಯಲ್ಲಿದ್ದೇನೆ. ಮನೆಯ ಸದಸ್ಯರು ಸೇರಿ 8ರಿಂದ 10 ಜನ ಕೂಲಿ ಕಾರ್ಮಿಕರನ್ನು ಕೊಯ್ಲು ಮಾಡಲು ಬಳಸಿಕೊಳ್ಳಲಾಗಿದೆ. ಒಟ್ಟು 50 ಸಾವಿರ ರೂ.ಗಳನ್ನು ಬೆಳೆಗೆ ಖರ್ಚು ಮಾಡಲಾಗಿದೆ. ಇದು ಮೂರು ತಿಂಗಳ ಬೆಳೆಯಾಗಿದ್ದು, 75ರಿಂದ 90 ದಿನಗಳ ಒಳಗೆ ಕೈ ಸೇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net