ಬಿರಿಯಾನಿ ತಿನ್ನುವ ಆಸೆಯಿಂದ ಒಂದೇ ಬೈಕ್ನಲ್ಲಿ ಕುಣಿಗಲ್ ಕಡೆ ಹೋಗುತ್ತಿದ್ದಾಗ ಬೆಂಗಳೂರು ಕಡೆ ಹೊರಟಿದ್ದ ಲಾರಿ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಮೂವರೂ ಒಂದೊಂದು ಕಡೆ ಹಾರಿ ಬಿದ್ದಿದ್ದು, ಅಭಿಷೇಕ್ ಹಾಗೂ ಮನೋಜ್ ಸ್ಥಳದಲ್ಲೆ ಕೊನೆಯುಸಿರೆಳೆದರೆ, ನವೀನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಅಸುನೀಗಿದ್ದಾನೆ ಎನ್ನಲಾಗಿದೆ.