ಚಿಕಿತ್ಸೆ ಲಿಸದೆ ಮೂವರು ಸಾವು

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಸಿಲಿಂಡರ್​ ಸ್ಫೋಟದಿಂದ ಗಂಭೀರ ಗಾಯಗೊಂಡಿದ್ದ ಮೂವರು

ಕನಕಪುರ: ಅಡುಗೆ ಅನಿಲ ಸೋರಿಕೆಯಿಂದ ಉಂಟಾದ ಬೆಂಕಿ ಅವಡದಲ್ಲಿ ತೀವ್ರ ಗಾಯಗೊಂಡಿದ್ದ ಒಂದೇ ಕುಟುಂಬದ ಮೂವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ರಾಮನಗರ ರಸ್ತೆ ಮೆಳೆಕೋಟೆ ಅಮರನಾರಾಯಣ ಬ್ಲಾಕ್​ ನಿವಾಸಿ ಸಿದ್ದರಾಜು(50), ಪತ್ನಿ ಚಂದ್ರಮ್ಮ(45), ಪುತ್ರ ಪ್ರಶಾಂತ್​(24) ಮೃತರು. ಕನಕಪುರದಲ್ಲಿ ತಳ್ಳುವ ಗಾಡಿಯಲ್ಲಿ ತಿಂಡಿ, ತಿನಿಸು ಮಾರುತ್ತಿದ್ದ ಸಿದ್ದರಾಜು ಕುಟುಂಬ ಜ.26ರಂದು ಮನೆ ಹೊರಭಾಗದಲ್ಲಿ ತಿಂಡಿ ತಯಾರಿಸುವ ವೇಳೆ ಅನಿಲ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡಿತ್ತು.
ಅವಡದಿಂದ ಗಂಭೀರಗಾಯಗೊಂಡಿದ್ದ ಮೂವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ಪ್ರಶಾಂತ್​ ಜ.27ರಂದೇ ಮೃತಪಟ್ಟಿದರೆ, ಜ.29ರಂದು ಸಿದ್ದರಾಜು, ಜ.30ರಂದು ಚಂದ್ರಮ್ಮ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ದೇಗುಲ ಮಠದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಿತು. ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net