ಕನಕಪುರ: ರಾಮನಗರ ರಸ್ತೆಯ ಮೆಳೆಕೋಟೆ ಅಮರನಾರಾಯಣ ಬ್ಲಾಕ್ನ ಸಿದ್ದರಾಜು ಎಂಬುವವರ ಮನೆಯಲ್ಲಿ ಸೋಮವಾರ ಅನಿಲ ಸೋರಿಕೆಯಿಂದ ಬೆಂಕಿ ತಗುಲಿ ಇಬ್ಬರು ಗಾಯಗೊಂಡಿದ್ದಾರೆ..ಸಿದ್ದರಾಜು(50), ಈತನಪತ್ನಿ ಚಂದ್ರಮ್ಮ(45), ಪುತ್ರ ಪ್ರಶಾಂತ್ (24) ಅವರಿಗೆ ಸುಟ್ಟು ಗಾಯಗಳಾಗಿದ್ದು, ಬೆಂಗಳೂರಿನವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ..ತಳ್ಳುವ ಗಾಡಿಯಲ್ಲಿ ತಿಂಡಿತಿನಿಸುಗಳನ್ನು ಮಾರಾಟ ಮಾಡುವ ಕುಟುಂಬ ಸದಸ್ಯರು ಮನೆಯ ಹೊರಭಾಗದಲ್ಲಿ ತಿಂಡಿ ಮಾಡುತ್ತಿರುವ ವೇಳೆ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ. .ಪ್ರಶಾಂತ್(24) ಅವರ ಎದೆ, ಕೈಕಾಲು ಸುಟ್ಟಿದ್ದರೆ, ಈತನ ತಂದೆ ಸಿದ್ದರಾಜು ಹಾಗೂ ಚಂದ್ರಮ್ಮ ಅವರ ಕೈಕಾಲುಗಳಿಗೆ ಸುಟ್ಟಗಾಯಗಳಾಗಿವೆ. ನಗರ ಪೊಲೀಸರು ಸ್ಥಳ ಪರಿಶೀಲಿಸಿದ್ದಾರೆ.