ಮಾಗಡಿ & ಹುಲಿದುರ್ಗ ರಸ್ತೆಯ ಹನುಮಂತಯ್ಯ ಪಾಳ್ಯದ ಬಳಿ ಮದ್ಯದ ಅಮಲಿನಲ್ಲಿ ಸರಣಿ ಅಪಘಾತವೆಸಗಿದ ಕ್ಯಾಂಟರ್ ಚಾಲಕನಿಗೆ ಸ್ಥಳಿಯರು ಥಳಿಸಿದರು.
Published on:
Copied
Follow Us
ಮಾಗಡಿ: ಹುಲಿದುರ್ಗ ರಸ್ತೆಯ ಹನುಮಂತಯ್ಯಪಾಳ್ಯದ ಬಳಿ ಮಂಗಳವಾರ ಸಂಭವಿಸಿದ ಸರಣಿ ಅಪಘಾತದಲ್ಲಿ ಮೂರು ಕಾರುಗಳು ಪಲ್ಟಿಯಾಗಿದ್ದು, ಮೂವರು ಗಾಯಗೊಂಡಿದ್ದಾರೆ.
ಮದ್ಯಸೇವನೆ ಮಾಡಿದ್ದ ಕ್ಯಾಂಟರ್ ಚಾಲಕ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿ ಮೂರು ಕಾರಿಗೆ ಡಿಕ್ಕಿಹೊಡೆದಿದ್ದರಿಂದ ಕಾರುಗಳು ಪಲ್ಟಿಯಾಗಿವೆ. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯ ಸಂಭವಿಸಿಲ್ಲ.
ಚಾಲಕನಿಗೆ ಥಳಿತ
ಮದ್ಯದ ಅಮಲಿನಲ್ಲಿ ಕ್ಯಾಂಟರ್ ವಾಹನ ಚಲಾಯಿಸಿ ಅಪಘಾತಕ್ಕೆ ಕಾರಣನಾದ ಚಾಲಕನಿಗೆ ಸಾರ್ವಜನಿಕರು ಧರ್ಮದೇಟು ನೀಡಿದರು. ಈ ವೇಳೆ ಸಂಚಾರ ದಟ್ಟಣೆ ಉಂಟಾಗಿತ್ತು. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.