ನಾಡಬಾಂಬ್​ ಸ್ಫೋಟ ಮೂವರ ಬಂಧನ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಹಸುವಿನ ಬಾಯಿ ಛಿದ್ರಗೊಂಡಿದ್ದ ಪ್ರಕರಣ > 2 ಜೀವಂತ ಮದ್ದುಗಳ ವಶ

ಕನಕಪುರ: ಕೋಡಿಹಳ್ಳಿ ಹೋಬಳಿ ಆಲನಾಥ ಹೊರವಲಯದಲ್ಲಿ ಕಾಡು ಪ್ರಾಣಿಗಳನ್ನು ಬೇಟೆಯಾಡಲು ಇಟ್ಟಿದ್ದ ನಾಡಬಾಂಬ್​ ಸ್ಫೋಟಗೊಂಡು ಹಸುವಿನ ಬಾಯಿ ಛಿದ್ರಗೊಂಡಿದ್ದ ಪ್ರಕರಣ ಸಂಬಂಧಿಸಿದಂತೆ ಮೂವರನ್ನು ಕೋಡಿಹಳ್ಳಿ ಪೊಲೀಸರು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಹೊಸದೊಡ್ಡಿ ಗ್ರಾಮದ ಶಿವರಾಜು, ಕೃಷ್ಣಮೂರ್ತಿ ಹಾಗೂ ಕರಿಯಪ್ಪನದೊಡ್ಡಿ ಗ್ರಾಮದ ಶಿವನಪ್ಪ ಬಂಧಿತರು.
ಏನಿದು ಪ್ರಕರಣ? ಕೋಡಿಹಳ್ಳಿ ಹೋಬಳಿ ಆಲನಾಥ ಹೊರವಲಯದಲ್ಲಿ ದುರುಳರು ನಾಡಬಾಂಬ್​ ಇಟ್ಟಿದ್ದರು. ಇದೇ ಸ್ಥಳದಲ್ಲಿ ಮೇಯುತ್ತಿದ್ದ ಹಸು ನಾಡಬಾಂಬ್​ಗೆ ಬಾಕಿ ಹಾಕಿದ ಪರಿಣಾಮ ಬಾಂಬ್​ ಸ್ಫೋಟಗೊಂಡು, ಹಸುವಿನ ಬಾಯಿ ಸಂಪೂರ್ಣ ಛಿದ್ರಗೊಂಡಿತ್ತು. ಈ ಬಗ್ಗೆ ಹಸುವಿನ ಮಾಲೀಕ ಕಾಡು ಶಿವನೇಗೌಡ ಎಂಬುವವರು ಕೋಡಿಹಳ್ಳಿ ಪೋಲಿಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಸಬ್​ಇನ್​ಸ್ಪೆಕ್ಟರ್​ ಪ್ರದಿಪ್​ಕುಮಾರ್​ ಹಾಗೂ ಸಿಬ್ಬಂದಿ ಸ್ಥಳ ಪರಿಶೀಲಿಸಿ, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು.
ಇದು ಮೊದಲೇನಲ್ಲ
ತಾಲೂಕಿನ ಹೊಸದುರ್ಗ ಗ್ರಾಮದ ಬಳಿ ಕಾಡು ಹಂದಿ ಬೇಟೆಗಾಗಿ ಇಟ್ಟಿದ್ದ ನಾಡ ಬಾಂಬ್​ ತಿಂದು ಹಸುಬಾಯಿ ಛಿದ್ರವಾಗಿತ್ತು, ಇದಲ್ಲದೇ ಏಳಗಳ್ಳಿ, ಹಾರೋಬೆಲೆ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಇಂತಹ ಪ್ರಕರಣಗಳು ನಡೆಯುತ್ತಲೇ ಇವೆ. ನಾಡಬಾಂಬ್​ ತಯಾರಕರು ಯಾರು?, ಎಲ್ಲಿಂದ, ಇಲ್ಲಿಗೆ ಹೇಗೆಬರುತ್ತವೆ ? ಎಂಬುದರ ಬಗ್ಗೆ ತನಿಖೆ ನಡೆಸಿ, ಇದಕ್ಕೆ ಕಡಿವಾಣ ಹಾಕಬೇಕಿದೆ ಎಂದು ಪ್ರಾಣಿಪ್ರಿಯರು ಒತ್ತಾಯಿಸಿದ್ದಾರೆ.
ಮನೆಯಲ್ಲಿ ಇನ್ನೂ 2 ಬಾಂಬ್​ಗಳು
ಬಂಧಿತರು ಮನೆಯಲ್ಲಿ ಇನ್ನೂ ಎರಡು ಜೀವಂತ ಬಾಂಬ್​ಗಳನ್ನು ಸಂಗ್ರಹಿಸಿಟ್ಟಿರುವುದಾಗಿ ತೀವ್ರ ವಿಚಾರಣೆ ಒಳಪಡಿಸಿದ ವೇಳೆ ತಪ್ಪೊಪ್ಪಿಕೊಂಡಿದ್ದು, ಸದ್ಯ ಅವುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net