ಕಾರಿನೊಂದಿಗೆ ಪರಾರಿಯಾಗಿದ್ದ ಮೂವರ ಬಂಧನ

ಉಬರ್​ನಲ್ಲಿ ಕಾರು ಬಾಡಿಗೆಗೆ ಪಡೆದು ಬಳಿಕ ಚಾಲಕನಿಗೆ ವಂಚಿಸಿದ್ದ ಆರೋಪಿಗಳನ್ನು ಹಾರೋಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಉಬರ್​ನಲ್ಲಿ ಕಾರು ಬಾಡಿಗೆಗೆ ಪಡೆದು ಬಳಿಕ ಚಾಲಕನಿಗೆ ವಂಚಿಸಿದ್ದ ಆರೋಪಿಗಳನ್ನು ಹಾರೋಹಳ್ಳಿ ಪೊಲೀಸರು ಬಂಧಿಸಿದ್ದಾರೆ.
Published on
ಹಾರೋಹಳ್ಳಿ: ಉಬರ್​ ಕಾರು ಚಾಲಕನನ್ನು ಬೆದರಿಸಿ, ಮೊಬೈಲ್​, ನಗದು ಕಿತ್ತುಕೊಂಡು ಕಾರು ಸಮೇತ ಪರಾರಿಯಾಗಿದ್ದ ಆರೋಪಿಗಳನ್ನು ಹಾರೋಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಚನ್ನಪಟ್ಟಣದ ಲಾಳಟ್ಟ ನಿವಾಸಿಗಳಾದ ಜೀವನ್​, ಅಭಿಷೇಕ ಹಾಗೂ ಬೆಂಗಳೂರು ಹೊಸಕೆರೆಹಳ್ಳಿಯ ರತ್​ ಬಂಧಿತರು.
ಘಟನೆ ಹಿನ್ನೆಲೆ
ಬೆಂಗಳೂರು&ಮೈಸೂರು ಮುಖ್ಯ ರಸ್ತೆಯ ವಂಡರ್​ ಲಾ ಗೇಟ್​ನಿಂದ ಚನ್ನಪಟ್ಟಣಕ್ಕೆ ಬಿಡಲು ಇಬ್ಬರು ಉಬರ್​ನಲ್ಲಿ ಕಾರು ಬುಕ್​ ಮಾಡಿಕೊಂಡಿದ್ದರು. ಕಾರು ಚನ್ನಪಟ್ಟಣಕ್ಕೆ ಬಂದಾಗ ಅಲ್ಲಿ ಮತ್ತೊಬ್ಬರನ್ನು ಹತ್ತಿಸಿಕೊಂಡು, ಚನ್ನಪಟ್ಟಣ ಬೇಡ ಹಾರೋಹಳ್ಳಿಗೆ ಬಿಡುವಂತೆ ತಿಳಿಸಿದ್ದಾರೆ. ಅದರಂತೆ ಉಬರ್​ ಚಾಲಕ ಕಾರನ್ನು ಹಾರೋಹಳ್ಳಿಯತ್ತ ಚಲಾಯಿಸುವಾಗ ಮಾರ್ಗ ಮಧ್ಯೆ ಮಾರಕಾಸ್ತ್ರ ತೋರಿಸಿ ಚಾಲಕನನ್ನು ಬೆದರಿಸಿ, ಕಾರಿನಿಂದ ಕೆಳಗೆ ಇಳಿಸಿದ್ದಾರೆ. ಚಾಲಕನ ಅಂಕೌಟ್​ನಲ್ಲಿದ್ದ 2 ಸಾವಿರ ರೂ.ಗಳನ್ನು ೋನ್​ ಪೇ ಮಾಡಿಸಿಕೊಂಡು, ಮೊಬೈಲ್​ ಕಿತ್ತುಕೊಂಡು ಕಾರು ಸಮೇತ ಪರಾರಿಯಾಗಿದ್ದರು. ಟನೆ ಸಂಬಂಧ ಕಾರು ಚಾಲಕ ರಾಮನಗರದ ಜಾನ್​ ವಿಲಿಯಂ ಹಾರೋಹಳ್ಳಿ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು.
ತನಿಖೆ ಕೈಗೊಂಡ ಇನ್​ಸ್ಪೆಕ್ಟರ್​ ಮಲ್ಲೆಶ್​ ನೇತೃತ್ವದ ತಂಡ ಪ್ರಕರಣ ದಾಖಲಾದ ಎರಡು ದಿನಗಳಲ್ಲಿ ಮೂವರು ಆರೋಪಿಗಳನ್ನು ಬಂಧಿಸಿ, ಕಾರು, ಮೊಬೈಲ್​ ಹಾಗೂ ಕೃತ್ಯಕ್ಕೆ ಬಳಸಿದ್ದ ಮಾರಕಾಸಗಳನ್ನು ವಶಪಡಿಸಿಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net