ಈಕೆಯ ಮೈಮೇಲಿದ್ದ ಒಡವೆಗಳು ಇಲ್ಲದಿರುವುದನ್ನು ಗಮನಿಸಿದ್ದ ಮಹದೇವಯ್ಯ ತಮ್ಮ ತಾಯಿಯನ್ನು ಕೊಲೆ ಮಾಡಲಾಗಿದೆ. ಗ್ರಾಮದ ಗಿರಿಜಾ ಅವರೇ ಈ ಕೃತ್ಯ ನಡೆಸಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿ ರಾಮನಗರ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದರು. ದೂರುದಾರರ ಸುಳಿವಿನ ಮೇರೆಗೆ ಗಿರಿಜಾ ಮತ್ತು ಮಹೇಶ್ ಇಬ್ಬರೂ ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಕೊಲೆ ಆಗಿರುವುದು ತಿಳಿದು ಬಂದಿದೆ. ಗ್ರಾಮಾಂತರ ಸಿಪಿಐ ಮುರಳಿ ನೇತೃತ್ವದಲ್ಲಿ ತನಿಖೆ ನಡೆಸಿದ್ದು, ಪಿಎಸ್ಐ ಸಿದ್ದರಾಜು, ನರಸಿಂಹಯ್ಯ, ಅರ್ಜುನ್ ಸಿಬ್ಬಂದಿ ಸುಜಾತಾ, ಗಿರಿಯಮ್ಮ, ವೀಣಾ, ರವಿ, ಲತಾ, ಸುನೀತ ಭಾಗವಹಿಸಿದ್ದರು.